ಜಿಲ್ಲೆ

ಕಾಡಾನೆಗಳ ದಾಳಿಗೆ ರಾಗಿ, ಬಾಳೆ ಬೆಳೆ ಹಾನಿ

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟ ತಪ್ಪಲಿನ ದೊಡ್ಡಾಣೆ ಗ್ರಾಮದಲ್ಲಿ ಬುಧವಾರ ರಾತ್ರಿ ಸಲಗವೊಂದು ಜಮೀನಿಗೆ ಲಗ್ಗೆ ಇಟ್ಟು ರಾಗಿ ಫಸಲನ್ನು ನಾಶಗೊಳಿಸಿದೆ. ಮತ್ತೊಂದೆಡೆ ವೈಶ್ಯಂಪಾಳ್ಯ ಗ್ರಾಮದಲ್ಲಿ ಕಾಡಾನೆಗಳ ಹಾವಳಿಗೆ ಬಾಳೆ ಫಸಲು ನಾಶವಾಗಿದೆ.


ಮ.ಬೆಟ್ಟದ ಮಹದೇವಸ್ವಾಮಿ ಎಂಬುವರು 3 ಎಕರೆಯಲ್ಲಿ ರಾಗಿ ಫಸಲನ್ನು ಬೆಳೆದಿದ್ದರು. ತಡರಾತ್ರಿ ಸಲಗ ಜಮೀನಿಗೆ ಲಗ್ಗೆ ಇಟ್ಟು ಫಸಲನ್ನು ತುಳಿದು ನಾಶಪಡಿಸಿದೆ. ವೈಶ್ಯಂಪಾಳ್ಯ ಗ್ರಾಮದ ರಾಮಸ್ವಾಮಿ ಎಂಬುವರ ಜಮೀನಿಗೆ ಲಗ್ಗೆ ಇಟ್ಟ ಕಾಡಾನೆಗಳು ಬಾಳೆ ಫಸಲನ್ನು ನಾಶಗೊಳಿಸಿ, ಕೃಷಿ ಪಂಪ್‌ಸೆಟ್ ಪರಿಕರಗಳಿಗೆ ಹಾನಿ ಮಾಡಿವೆ.