ಹೇರೂರು ಗ್ರಾಮದಲ್ಲಿ ಮನೆ ಛಾವಣಿಗೆ ಹಾನಿಯಾಗಿರುವುದನ್ನು ಪಿಡಿಒ ಮಹೇಶ್, ವಿಎ ಸಿದ್ದಪ್ಪ ವೀಕ್ಷಿಸಿದರು.  
ಜಿಲ್ಲೆ

ವರ್ಷಧಾರೆಯಿಂದ ಮನೆಗಳಿಗೆ ಹಾನಿ

ಎಸ್.ಎನ್.ರವೀಂದ್ರ

ಕೊಪ್ಪ: ತಾಲೂಕಿನಲ್ಲಿ ಮಳೆ ಮುಂದುವರಿದಿದೆ. ಸೋಮವಾರ ಮಧ್ಯಾಹ್ನ ಆರಂಭವಾದ ಮಳೆ ರಾತ್ರಿಯೂ ಧಾರಾಕಾರವಾಗಿ ಸುರಿಯಿತು.

ಮಂಗಳವಾರ ಮಧ್ಯಾಹ್ನ ಪಟ್ಟಣದಲ್ಲಿ ಕೆಲಕಾಲ ಮಳೆಯಾಯಿತು. ಮಳೆಯಿಂದ ಹೇರೂರು ಗ್ರಾಮದ ನಾರಾಯಣ ಎಂಬುವವರ ಮನೆ ಛಾವಣಿಗೆ ಹಾನಿಯಾಗಿದೆ ಹಾಗೂ ಗೋಡೆ ಬಿರುಕು ಬಿಟ್ಟಿದೆ. ವೀರಗಲ್ಲುಮಕ್ಕಿಯ ಈರಯ್ಯ ಎಂಬುವವರ ಮನೆ ಛಾವಣಿಗೆ ಹಾನಿಯಾಗಿದೆ. ಪಿಡಿಒ ಮಹೇಶ್, ವಿ.ಎ ಸಿದ್ದಪ್ಪ ವೀಕ್ಷಿಸಿದರು.