ಜಿಲ್ಲೆ

ಗಾಳಿ-ಮಳೆಗೆ ಅಡಕೆ ತೋಟ ಹಾನಿ

ಉತ್ತರ ಕನ್ನಡ ಡೆಸ್ಕ್

ಸಿದ್ದಾಪುರ: ತಾಲೂಕಿನಲ್ಲಿ ಗಾಳಿ-ಮಳೆ ಮುಂದುವರೆದ ಪರಿಣಾಮ ಒಂದು ಮನೆ ಹಾಗೂ ಅಡಕೆ ತೋಟಕ್ಕೆ ಹಾನಿ ಸಂಭವಿಸಿದೆ.

ತಾಲೂಕಿನ ಕಾರಗೋಡ ಗ್ರಾಮದ ಕಡವಡಿಯ ಶ್ರೀಧರ ಗಣಪತಿ ಭಟ್ಟ ಅವರ ಅಡಕೆ ತೋಟಕ್ಕೆ ಮರವೊಂದು ಬಿದ್ದು ಅಂದಾಜು 15 ಸಾವಿರ ರೂ. ಹಾನಿ ಸಂಭವಿಸಿದೆ. ಇಟಗಿ ಹರಿಜನಕೇರಿಯ ಮಂಗಲಾ ಕೆರಿಯಾ ಹರಿಜನ ಅವರ ಕಚ್ಚಾಮನೆಯ ಮುಂಭಾಗ ಕುಸಿದು ಬಿದ್ದು 20 ಸಾವಿರ ರೂ. ಹಾನಿ ಸಂಭವಿಸಿದೆ. ತಾಲೂಕಿನಲ್ಲಿ ಗುರುವಾರ ಬೆಳಗ್ಗೆಯಿಂದ ಶುಕ್ರವಾರ ಬೆಳಗಿನವರೆಗೆ 98.2 ಮಿ.ಮೀ. ಮಳೆ ಬಿದ್ದಿದ್ದು, ಇಲ್ಲಿಯವರೆಗೆ ಈ ವರ್ಷ 995.2 ಮಿ.ಮೀ. ಮಳೆ ಬಿದ್ದು ದಾಖಲಾಗಿದೆ.