ಆನೇಕಲ್: ಅತ್ತಿಬೆಲೆ ಗಡಿಯಲ್ಲಿ ಭಾನುವಾರ ಸಂಜೆ ಸುರಿದ ಮಳೆಗೆ ಪೊಲೀಸರು ಹಾಗೂ ಆರೋಗ್ಯ ಇಲಾಖೆ ತಪಾಸಣೆಗೆಂದು ಹಾಕಿದ್ದ ಶೆಡ್‌ಗಳು ಜಖಂಗೊಂಡಿವೆ.
ಟೋಲ್ ಬಳಿ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಲಾಗಿತ್ತು. ತಪಾಸಣೆಗೆ ಬಳಸಲು ಬೇಕಾದ ವಸ್ತುಗಳನ್ನು ಶೆಡ್‌ನಲ್ಲಿಡಲಾಗಿತ್ತು. ಆದರೆ ಗಾಳಿ ಮಳೆಗೆ ಶೆಡ್‌ಗಳು ತಲೆಕೆಳಗಾಗಿದ್ದವು.
ಮಳೆ ನಿಂತ ನಂತರ ಮತ್ತದೇ ಶೆಡ್ ನಿಲ್ಲಿಸಿಕೊಂಡು ಅದರಲ್ಲೇ ಆಶಾ ಕಾರ್ಯಕರ್ತೆಯರು ಕೆಲಸ ಮುಂದುವರಿಸಿದರು. ಪಟ್ಟಣ, ಅತ್ತಿಬೆಲೆ, ಸರ್ಜಾಪುರ ಭಾಗದಲ್ಲಿ ಭಾರಿ ಮಳೆಯಾಗಿದ್ದರಿಂದ ಅಂಗಡಿ ಮುಂಗಟ್ಟುಗಳಲ್ಲಿ ಹಾಕಿದ್ದ ನಾಮಫಲಕ ಗಾಳಿಗೆ ಹಾರಿದವು. ಸೋಲೂರು ಭಾಗದಲ್ಲಿ ಮರಗಳ ಕೊಂಬೆ ಮುರಿದು ಬಿದ್ದವು.