ಮಡಿಕೇರಿ:
ತಾಲೂಕಿನ ಬೇಂಗೂರು ಪಂಚಾಯಿತಿ ವ್ಯಾಪ್ತಿಯ ಐವತೊಕ್ಲು ಗ್ರಾಮದಲ್ಲಿ ಭಾರೀ ಮಳೆ ಮತ್ತು ಗಾಳಿಗೆ ವಾಸದ ಮನೆಯೊಂದು ಕುಸಿದು ಬಿದ್ದಿದೆ.
ಇಲ್ಲಿನ ಟಿ.ಎಸ್. ಕಾರ್ಯಪ್ಪ ಎಂಬವವರಿಗೆ ಸೇರಿದ ವಾಸದ ಮನೆ ಸೋಮವಾರ ರಾತ್ರಿ ಅಧಿಕ ಮಳೆ ಮತ್ತು ಗಾಳಿಯಿಂದ ಕುಸಿದು ಬಿದ್ದು ಮನೆಯ ಒಳಗೆ ಇದ್ದ ಸಾಮಗ್ರಿಗಳಿಗೆ ಹಾನಿಯಾಗಿದೆ.
ಮನೆ ಕುಸಿದ ಸಂದರ್ಭ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.