ಮಡಿಕೇರಿ:
ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿ ಅಣೆಕಟ್ಟೆ ಪುನಶ್ಚೇತನ ಮತ್ತು ಅಭಿವÊದ್ಧಿ ಕಾಮಗಾರಿಗೆ ಮಳೆಯೇ ಪ್ರಮುಖ ಶತ್ರುವಿನಂತೆ ಕಾಣುತ್ತಿದೆ. 2022ರಿಂದ ಈ ಕೆಲಸದ ಪ್ರಕ್ರಿಯೆಗಳು ಶುರುವಾಗಿದ್ದರೂ ಈ ತನಕ ಕೇವಲ ಶೇ. 20ರಷ್ಟು ಮಾತ್ರ ಪ್ರಗತಿ ಆಗಿದೆ. ಇದೀಗ ಮತ್ತೆ ಮಳೆಗಾಲ ಆರಂಭವಾಗಲು ದಿನಗಣನೆ ಆರಂಭವಾಗಿದ್ದು 130 ಕೋಟಿ ರೂ. ಮೊತ್ತದ ಈ ಬೃಹತ್ ಯೋಜನೆ ಕುಂಟುತ್ತಾ ಸಾಗುವಂತಾಗಿದೆ.
ದೇಶದಲ್ಲೇ ಮೊದಲು ಎನ್ನಲಾದ ಅಣೆಕಟ್ಟೆಗೆ ನೀರೊದಗಿಸುವ ಜಲಾನಯನ ಪ್ರದೇಶವೊಂದರ ಪುನಶ್ಚೇತನ ಕಾರ್ಯ ಕೊಡಗಿನಲ್ಲಿ ನಡೆಯುತ್ತಿದೆ. ಜಲಾಶಯಗಳಲ್ಲಿ ಹೂಳು ತುಂಬಿಕೊAಡರೆ ಅದನ್ನು ತೆರವು ಮಾಡುವ ಮೂಲಕ ಅಣೆಕಟ್ಟೆ ಸಾಮರ್ಥ್ಯ ಮರುಸ್ಥಾಪಿಸಲು ಪ್ರಯತ್ನಿಸುವುದು ಸಾಮಾನ್ಯ. ಆದರೆ ಕಾವೇರಿ ಕೊಳ್ಳದ ಪ್ರಮುಖ ಜಲಾಶಯವಾದ ಹಾರಂಗಿಯಲ್ಲಿ ವಿಭಿನ್ನ ಪ್ರಯತ್ನವೊಂದು ಕಾವೇರಿ ನೀರಾವರಿ ನಿಗಮದ ಮೂಲಕ ನಡೆಯುತ್ತಿದೆ. ಜಲಾಶಯದ ಹಿನ್ನೀರಿನಲ್ಲಿ ಸಂಗ್ರಹವಾಗಿರುವ ಹೂಳು ತೆಗೆಯುವುದರ ಜತೆಗೆ ಜಲಾನಯನ ಪ್ರದೇಶದಲ್ಲಿ ಮತ್ತೆ ಗುಡ್ಡ ಕುಸಿಯದಂತೆ, ಪುನಃ ಹೂಳು ಬಂದು ಜಲಾಶಯ ಸೇರದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವ ಉದ್ದೇಶದಿಂದ 130 ಕೋಟಿ ರೂ. ವೆಚ್ಚದ ಹಾರಂಗಿ ಅಣೆಕಟ್ಟೆ ಪುನ್ಚೇತನ ಮತ್ತು ಅಭಿವÊದ್ಧಿ ಕಾಮಗಾರಿ ನಡೆಯುತ್ತಿದೆ.
2018ರ ಆ.13, 14 ಹಾಗೂ 15ರಂದು ಹಾರಂಗಿ ಜಲಾನಯನ ಪ್ರದೇಶದಲ್ಲಿ ಬರುವ ಮಡಿಕೇರಿ, ಕಾಲೂರು, ಹೆಬ್ಬೆಟಗೇರಿ, ಮಕ್ಕಂದೂರು, ಮುಕ್ಕೋಡ್ಲು, ಹಟ್ಟಿಹೊಳೆ, ಹರದೂರು, ಹೇರೂರು ಭಾಗಗಳಲ್ಲಿ ಕುಂಭದ್ರೋಣ ಮಳೆ ಸುರಿದಿತ್ತು. ಈ ಬೆನ್ನಲ್ಲೇ ಈ ವ್ಯಾಪ್ತಿಯ ಬಹುತೇಕ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿ, ಬೆಟ್ಟದಿಂದ ಜರಿದು ಬಂದಿದ್ದ ಮಣ್ಣು ಹಾರಂಗಿ ಮತ್ತು ಅದರ ಉಪನದಿಗಳ ಮೂಲಕ ಜಲಾಶಯ ತಲುಪಿತ್ತು. ಹಾಗಾಗಿ ಜಲಾಶಯದಲ್ಲಿ ಈಗ ಸಾಮಾನ್ಯಕ್ಕಿಂತ ಹೆಚ್ಚು ಹೂಳು ನಿಂತಿರುವುದರಿAದ ಜಲಾಶಯದ ನೀರಿನ ಸಂಗ್ರಹ ಪ್ರಮಾಣದಲ್ಲಿ ಕುಸಿತವಾಗಿದೆ.
ಕರ್ನಾಟಕ ಇಂಜಿನಿರ‍್ಸ್ ರೀಸರ್ಚ್ ಸ್ಟೇಷನ್ ಒಪ್ಪಿಸಿದ ಜವಾಬ್ದಾರಿ ಹಿನ್ನೆಲೆಯಲ್ಲಿ ಜಿಯೋ ಮೇರೈನ್ ಸೊಲ್ಯೂಷನ್ ಪ್ರೆö್ತçÊವೆಟ್ ಲಿಮಿಟೆಡ್ ಸಂಸ್ಥೆಯ 8 ತಜ್ಞರ ತಂಡ 2019ರ ಫೆಬ್ರವರಿಯಲ್ಲಿ ಬಾತಿಮೆಟ್ರಿಕ್ ಸರ್ವೆ ಮತ್ತು ಹೈಡ್ರೋಗ್ರಾಫಿಕ್ ಸರ್ವೆ ಎನ್ನುವ ವಿಧಾನಗಳ ಮೂಲಕ ಹಿನ್ನೀರಿನಲ್ಲಿ ವಿಸ್ತೃತ ಅಧ್ಯಯನ ನಡೆಸಿ, ಹೂಳಿನ ಅಂದಾಜು ಸಮೀಕ್ಷೆ ನಡೆಸಿತ್ತು. ಇವರ ಪ್ರಕಾರ 8.5 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದ ಹಾರಂಗಿ ಜಲಾಶಯದಲ್ಲಿ ಅಂದಾಜು 1 ಟಿಎಂಸಿಗೂ ಅಧಿಕ ಹೂಳಿನ ಸಂಗ್ರಹ ಇದೆ ಎನ್ನುವ ವರದಿ ನೀಡಲಾಗಿತ್ತು.
ಜಲಾಶಯದಲ್ಲಿ ಹೂಳಿನ ಪ್ರಮಾಣ ಅಧಿಕವಾಗಿ ನೀರಿನ ಸಂಗ್ರಹ ಸಾಮರ್ಥ್ಯ ಕುಸಿದಿರುವ ಬಗ್ಗೆ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರೈತರಿಂದ ತೀವ್ರ ಆತಂಕ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಕೊಡಗು, ಹಾಸನ ಹಾಗೂ ಮೈಸೂರು ಜಿಲ್ಲೆಗಳ 1,34,895 ಎಕರೆ ಪ್ರದೇಶಕ್ಕೆ ನೀರೊದಗಿಸುವ ಹಾರಂಗಿ ಜಲಾಶಯದಲ್ಲಿ ಸಂಗ್ರಹವಾಗಿರುವ ಹೂಳೆತ್ತುವ ಮೂಲಕ ಅಣೆಕಟ್ಟೆ ಉಳಿಸಿಕೊಳ್ಳುವಂತೆ ಒತ್ತಾಯ ಹೇರಿದ್ದರು. ಹಾಗಾಗಿ ಹೆಚ್.ಡಿ. ಕುಮಾರಸ್ವಾಮಿ ನೇತÊತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯ 2018ರ ಬಜೆಟ್‌ನಲ್ಲಿ ಹೂಳೆತ್ತುವ ಕಾಮಗಾರಿಗಾಗಿ 130 ಕೋಟಿ ರೂ. ತೆಗೆದಿಡಲಾಗಿತ್ತು.
2018ರ ಬಜೆಟ್‌ಲ್ಲಿ 130 ಕೋಟಿ ರೂ. ಮೊತ್ತ ತೆಗೆದಿಟ್ಟಿದ್ದರೂ ವಿವಿಧ ಕಾರಣಗಳಿಂದ ಕಾಮಗಾರಿ ಶುರುವಾಗಿದ್ದು ಮಾತ್ರ 2022ರಲ್ಲಿ. ಬಜೆಟ್‌ನಲ್ಲಿ ಮೀಸಲಿರಿಸಲಾಗಿದ್ದ ಈ ಮೊತ್ತದಲ್ಲಿ 40 ಕೋಟಿ ರೂ.ಗಳನ್ನು ಹೂಳು ತೆಗೆಯಲು ಬಳಸಿದರೆ ಉಳಿದ 90 ಕೋಟಿ ರೂ.ಗಳನ್ನು ಅಲ್ಲಲ್ಲಿ ತಡೆಗೋಡೆ, ಪಿಕಪ್ (ಚೆಕ್‌ಡ್ಯಾಂ), ಸೇತುವೆ, ರಸ್ತೆ ನಿರ್ಮಾಣ ಹಾಗೂ ಅಧ್ಯಯನ ಕಾರ್ಯಕ್ಕೆ ಉಪಯೋಗಿಸಲಾಗುತ್ತಿದೆ. ಅಗತ್ಯವಿರುವ ಕಡೆ ಸೇತುವೆ, ರಸ್ತೆಗಳನ್ನು ನಿರ್ಮಿಸುವ ಮೂಲಕ ಜಲಾನಯನ ಪ್ರದೇಶದ ನಿವಾಸಿಗಳ ಬದುಕಿಗೂ ನೆರವು ನೀಡುವ ಯೋಜನೆ ಇದಾಗಿದೆ ಎನ್ನುತ್ತಾರೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು.
ಕೊಡಗಿನಲ್ಲಿ ವರ್ಷದ ಬಹುತೇಕ ತಿಂಗಳು ಮಳೆಗಾಲವೇ ಆಗಿದ್ದು, ನದಿ ತುಂಬಿ ಹರಿಯುತ್ತಿರುವುದರಿಂದ ಕಾಮಗಾರಿ ನಡೆಸಲು ಕಷ್ಟವಾಗುತ್ತಿದೆ. ವರ್ಷದಲ್ಲಿ 5 ತಿಂಗಳು ಮಾತ್ರ ಕೆಲಸ ಮಾಡಲು ಅವಕಾಶ ಸಿಗುವುದರಿಂದ ಈ ಬೃಹತ್ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಶೇ. 20ರಷ್ಟು ಮಾತ್ರ ಕಾಮಗಾರಿ ಪೂರ್ಣವಾಗಿದೆ. ಹಟ್ಟಿಹೊಳೆ, ಹಮ್ಮಿಯಾಲ, ನಂದಿಮೊಟ್ಟೆ ಭಾಗದ ನದಿಯ ಪಾರ್ಶ್ವಗಳಲ್ಲಿ ಗುಡ್ಡಕುಸಿತ, ಕೊರೆತ ಹಾಗೂ ಉಪನದಿಗಳಲ್ಲಿನ ನೀರಿನ ಹರಿಯುವಿಕೆ ವೇಗವನ್ನು ಮಿತಿಗೊಳಿಸಲು ಒಟ್ಟು ಸುಮಾರು 4,700 ಮೀಟರ್ ಸ್ಟೀಲ್ ವೈರ್ ಮೆಸ್ ಗೆಬಿಯನ್ ವಾಲ್ ನಿರ್ಮಾಣ ಕಾರ್ಯ ಅಲಲ್ಲಿ ನಡೆಯುತ್ತಿದೆ.
ವಿವಿಧ ಕಡೆಗಳಲ್ಲಿ 3 ಸೇತುವೆಗಳನ್ನು ಪುನಃ ಕಟ್ಟುವ ಕೆಲಸ ನಡೆದಿದ್ದು, ಈ ಮಳೆಗಾಲದ ಒಳಗೆ ಈ ಕೆಲಸ ಪೂರ್ಣಗೊಳ್ಳುವ ನಿರೀಕ್ಷೆ ಇದೆ. 314 ಕಡೆಗಳಲ್ಲಿ ಪಿಕಪ್ (ಚೆಕ್‌ಡ್ಯಾಂ) ನಿರ್ಮಿಸುವ ಯೋಜನೆಯೂ ಇದ್ದು, ಕಾಮಗಾರಿಗಳು ಪ್ರಗತಿಯಲ್ಲಿ ಇದೆ. ಸದ್ಯ ನದಿ ಹರಿವಿನ ಪ್ರದೇಶದಲ್ಲಿ ಅಲ್ಲಲ್ಲಿ ಮಣ್ಣಿನ ರಾಶಿ, ಎಂ ಸ್ಯಾಂಡ್, ಕಲ್ಲು ಗುಡ್ಡೆ ಹಾಕಿರುವುದು ಕಂಡುಬರುತ್ತಿದೆ. ಒಂದು ವೇಳೆ ಮಳೆ ಬಂದು ನೀರಿನ ಹರಿವು ಹೆಚ್ಚಾದರೆ ಇವೆಲ್ಲಾ ಕೊಚ್ಚಿಹೋಗುವ ಸಾಧ್ಯತೆ ಇದೆ. ಹಾಗಾಗಿ ಮಳೆಗಾಲ ಶುರುವಾಗುವುದರ ಒಳಗೆ ಇದನ್ನೆಲ್ಲಾ ತೆಗೆಯÀಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನೀರು ಕಡಿಮೆ ಇರುವ ಸಂದರ್ಭದಲ್ಲಿ ಅಣೆಕಟ್ಟೆಯಿಂದ ಸುಮಾರು 1 ಕಿಮೀ ದೂರದಿಂದÀ ಹಿನ್ನೀರು ಪ್ರದೇಶದಲ್ಲಿ ನದಿಯ ಹರಿವಿನ ಇಕ್ಕೆಲಗಳಲ್ಲಿ ಸಂಗ್ರಹವಾಗಿರುವ ಹೂಳು ತೆಗೆಯುವ ಯೋಜನೆಯೂ ಸಿದ್ಧಪಡಿಸಲಾಗಿದೆ. ಈ ವೇಳೆ ಇಲ್ಲಿರುವ ಜಲಚರಗಳಿಗೆ ಯಾವುದೇ ಅಪಾಯ ಆಗದಂತೆ ಮುನ್ನೆಚ್ಚರಿಕೆ ಗೆದುಕೊಳ್ಳಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು. ಈ ಯೋಜನೆಯ ಪರಿಣಾಮಗಳ ಬಗ್ಗೆ ಅಧ್ಯಯನವೂ ನಡೆಯಲಿದೆ.
130 ಕೋಟಿ ರೂ. ವೆಚ್ಚದ ಹಾರಂಗಿ ಅಣೆಕಟ್ಟೆ ಪುನಶ್ಚೇತನ ಮತ್ತು ಅಭಿವÊದ್ಧಿ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಕಾಮಗಾರಿ 2022ರ ಸೆಪ್ಟೆಂಬರ್‌ನಲ್ಲಿ ಆರಂಭವಾಗಿದ್ದು, ಈ ವರ್ಷದ ಸೆಪ್ಟೆಂಬರ್‌ನಲ್ಲಿ ಮುಗಿಯಬೇಕಿತ್ತು. ಬಹುಕೋಟಿ ವೆಚ್ಚದ ಈ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಾಮಗಾರಿ ನಡೆತಯುವ ಪ್ರದೇಶದಲ್ಲಿ 600 ಮರಗಳ ತೆರವಿಗೆ ಅರಣ್ಯ ಇಲಾಖೆ ಅನುಮತಿಯೂ ಸಿಗಬೇಕಿದೆ.
ಡಾ. ಮಂತರ್ ಗೌಡ, ಮಡಿಕೇರಿ ಶಾಸಕ
ಹಾರಂಗಿ ಅಣೆಕಟ್ಟೆ ಪುನಶ್ಚೇತನ ಮತ್ತು ಅಭಿವÊದ್ಧಿ ಕಾಮಗಾರಿ ಈತನಕ ಶೇ. 20ರಷ್ಟು ಪೂರ್ಣಗೊಂಡಿದೆ. ವರ್ಷದ ಬಹುತೇಕ ಕಾಲ ಮಳೆ ಇರುವುದರಿಂದ ಜನವರಿಯಿಂದ ಮೇ ತನಕ ಮಾತ್ರ ಕೆಲಸ ಮಾಡಲು ಅವಕಾಶ ಸಿಗುತ್ತಿದೆ. ಈ ಮಳೆಗಾಲದ ಒಳಗೆ ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿದೆ. ಮಳೆಗಾಲ ಶುರುವಾಗುತ್ತಿದ್ದಂತೆ ನದಿ ಪಾತ್ರದಲ್ಲಿನ ಮಣ್ಣು ಸೇರಿದಂತೆ ಎಲ್ಲಾ ಸಾಮಗ್ರಿ ತೆರವು ಮಾಡಲಾಗುತ್ತದೆ. ಮುಂದಿನ ವರ್ಷ ಕಾಮಗಾರಿ ಮುಗಿಯಲಿದೆ.
ಐ.ಕೆ. ಪುಟ್ಟಸ್ವಾಮಿ, ಇಇ, ಹಾರಂಗಿ ಪುನರ್ವಸತಿ ವಿಭಾಗ, ಕಾವೇರಿ ನೀರಾವರಿ ನಿಗಮ