ಗೇರಮರಡಿ ಗ್ರಾಮದ ಗೊಲ್ಲರಹಟ್ಟಿಯಲ್ಲಿ ದಲಿತ ಸಂಘಟನೆಗಳ ಮುಖಂಡರು ಎಸಿ ಡಾ. ಕೆ.ಜೆ.ಕಾಂತರಾಜ್‌ಗೆ ಮನವಿ ಸಲ್ಲಿಸಿದರು. ಪ್ರೊ. ಹರಿರಾಮ್, ಡಾ. ಕೋದಂಡರಾಮ್, ಶೂದ್ರ ಶ್ರೀನಿವಾಸ್, ಡಿ.ಎನ್.ಸುನೀಲ್ ಇತರರಿದ್ದರು. 
ಜಿಲ್ಲೆ

ಗೊಲ್ಲರಹಟ್ಟಿ ದೇಗುಲ ಪ್ರವೇಶಿಸಿದ ದಲಿತರು

ಎಸ್.ಎನ್.ರವೀಂದ್ರ

ತರೀಕೆರೆ: ಗೇರಮರಡಿ ಗ್ರಾಮದ ಗೊಲ್ಲರಹಟ್ಟಿಯಲ್ಲಿ ದಲಿತ ಯುವಕನ ಮೇಲೆ ಹಲ್ಲೆ ಮತ್ತು ಜಾತಿ ನಿಂದನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧ ಮಂಗಳವಾರ ದಲಿತ ಮುಖಂಡರು ಗ್ರಾಮದ ಶ್ರೀ ಕಂಬ ರಂಗನಾಥಸ್ವಾಮಿ ದೇಗುಲ ಪ್ರವೇಶಿಸಿ ಪೂಜೆ ಸಲ್ಲಿಸಿದರು.

ದೇಗುಲಕ್ಕೆ ಹಾಕಿದ್ದ ಬೀಗವನ್ನು ಎಎಸ್ಪಿ ಕೃಷ್ಣಮೂರ್ತಿ, ಎಸಿ ಡಾ. ಕೆ.ಜೆ.ಕಾಂತರಾಜ್, ತಹಸೀಲ್ದಾರ್ ವಿ.ಎಸ್.ರಾಜೀವ್, ಡಿವೈಎಸ್ಪಿ ಡಾ. ಹಾಲಮೂರ್ತಿ ರಾವ್ ಸಮ್ಮುಖದಲ್ಲಿ ಬೀಗ ಒಡೆದು ದಲಿತ ಮುಖಂಡರು ಪ್ರವೇಶ ಮಾಡಿದರು. ಗೊಲ್ಲರಹಟ್ಟಿ ಗ್ರಾಮಸ್ಥರಿಂದ ಹಲ್ಲೆಗೊಳಗಾಗಿದ್ದ ಮಾರುತಿ ಎಂಬುವನಿಂದ ದೇವರಿಗೆ ಪೂಜೆ ಮಾಡಿಸಿದರು. ಹಲ್ಲೆ ಪ್ರಕರಣದ ಉಳಿದ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಪ್ರೊ. ಹರಿರಾಮ್, ಡಾ. ಕೋದಂಡರಾಮ್, ಶೂದ್ರ ಶ್ರೀನಿವಾಸ್, ರಮೇಶ್, ಚಂದ್ರಪ್ಪ, ಬಾಲರಾಜ್, ಡಿ.ಎನ್.ಸುನೀಲ್, ರಘು ಇತರರಿದ್ದರು.