ಜಿಲ್ಲೆ

ಆ.14ರಂದು ನಗರದಲ್ಲಿ ಅಹೋರಾತ್ರಿ ಧರಣಿ: ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಂ.ವಿ.ಕೃಷ್ಣ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ತಾಲೂಕಿನ ಹಲ್ಲೇಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ 7 ಎಕರೆಯನ್ನು ನಿವೇಶನ ರಹಿತರಿಗೆ ಪಂಚಾಯಿತಿ ವ್ಯಾಪ್ತಿಯ ಬಡಜನರಿಗೆ ನೀಡಬೇಕೆಂದು ಒತ್ತಾಯಿಸಿ ಆ.14 ರಂದು ನಗರದಲ್ಲಿ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

ಅಂದು ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆ ಮಾಡಲಾಗುವುದು. ಹಲ್ಲೇಗೆರೆ ಮೊಳೆ ಗ್ರಾಮ ಠಾಣಾ ಜಾಗ 6 ಎಕರೆ ಮತ್ತು ಹಲ್ಲೆಗೆರೆ ಸ.ನಂ.153ರ ಕೀರೆಮಡಿ 1 ಎಕರೆ ಜಮೀನಿದೆ. ಈ ಜಮೀನಿನಲ್ಲಿ ಹಲ್ಲೆಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ನಿವೇಶನ ರಹಿತ ಮತ್ತು ಬಡಜನರಿಗೆ ನೀಡಬೇಕೆಂಬುದು ನಮ್ಮ ಹೋರಾಟದ ಉದ್ದೇಶವಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮಿತಿಯ ಕೃಷ್ಣಪ್ಪ ಮಾಚಹಳ್ಳಿ, ಚಿಕ್ಕಬಳ್ಳಿ ಶಂಕರ್ ಇದ್ದರು.