ಜಿಲ್ಲೆ

ಜಾತಿ ವ್ಯವಸ್ಥೆ ತೊಲಗಿಸಲು ಶರಣರ ಪಣ

ಹನುಮಸಾಗರ: ದಲಿತ ವಚನಕಾರರು 12 ಶತಮಾನದಲ್ಲಿ ವಚನಗಳ ಮೂಲಕ ಜಾತೀಯತೆ ನಿರ್ಮೂಲನೆ ಮಾಡಲು ಶ್ರಮಿಸಿದರು ಎಂದು ಗ್ರಾಪಂ ಉಪಾಧ್ಯಕ್ಷ ಮಂಜುನಾಥ ಹುಲ್ಲೂರು ಹೇಳಿದರು.

ಗ್ರಾಪಂಯಲ್ಲಿ ಬುಧವಾರ ದಲಿತ ವಚನಕಾರರಾದ ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ಧೂಳಯ್ಯ ಹಾಗೂ ಶರಣ ಉರಿಲಿಂಗ ಪೆದ್ದಿ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ದಲಿತ ವಚನಕಾರರು ಎಲ್ಲರಂತೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕಾರ್ಯ ಮಾಡಿರುವುದು ಶ್ಲಾಘನೀಯ ಎಂದರು.

ಗ್ರಾಪಂ ಸದಸ್ಯರಾದ ಶ್ರೀಶೈಲ ಮೋಟಗಿ, ಸಂಗಮೇಶ ಕರಂಡಿ, ಶಿವಪ್ಪ ಕಂಪ್ಲಿ, ಮುತ್ತಣ್ಣ ಪತ್ತಾರ, ಮರೇಗೌಡ ಬೋದುರ, ವಿಶ್ವನಾಥ ಯಾಳಗಿ, ಪ್ರಶಾಂತ ಕುಲಕರ್ಣಿ, ಮುಖಂಡರಾದ ಹನುಮಂತ ಪೂಜಾರ, ಮೌಲಿ ಮೋಟಗಿ, ಕಳಕಪ್ಪ ನಿರ್ವಾಣಿ, ಖಾಜಾಸಾಬ ಡಾಲಾಯತ್, ಸೋಮಪ್ಪ ಹೊಸಮನಿ, ಶಿವಪ್ಪ ಹುಲ್ಲೂರು, ರಾಮಣ್ಣ ಬಂಡಿವಡ್ಡರ ಇತರರಿದ್ದರು.