ಜಿಲ್ಲೆ

ಅಸಹಜ ಸಾವು ಆರೋಪ ಹಿನ್ನೆಲೆ, ದಲಿತ ಮುಖಂಡ ಪಿ.ಡೀಕಯ್ಯ ಮೃತದೇಹದ ಮರು ಮರಣೋತ್ತರ ಪರೀಕ್ಷೆ

reportermng

ಉಪ್ಪಿನಂಗಡಿ: ಇತ್ತೀಚೆಗೆ ನಿಧನರಾದ ಹಿರಿಯ ಕಾರ್ಮಿಕ ಮುಂದಾಳು, ದಲಿತ ಮುಖಂಡ ಪಿ.ಡೀಕಯ್ಯ ಅವರ ಸಾವು ಅಸಹಜ ಎಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿ ದೂರು ನೀಡಿರುವ ಹಿನ್ನೆಲೆಯಲ್ಲಿ, ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಹೊರ ತೆಗೆಯುವ ಪ್ರಕ್ರಿಯೆ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ ನಡೆಯುತ್ತಿದೆ. ಡೀಕಯ್ಯ ಅವರು, ಮಿದುಳಿನ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದ್ದು, ಕುಟುಂಬಸ್ಥರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ದೂರು ಬಂದಿರುವ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆ ತನಿಖೆಗೆ ಮುಂದಾಗಿದೆ. ಬೆಳ್ತಂಗಡಿ ತಹಸೀಲ್ದಾರ್‌, ಹಿರಿಯ ಪೊಲೀಸ್‌ ಅಧಿಕಾರಿ, ಆರೋಗ್ಯ ಇಲಾಖೆ ಅಧಿಕಾರಿಗಳು ಅವರ ಮೃತದೇಹದ ಅಂತಿಮ ಸಂಸ್ಕಾರ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದು, ಮರಣೋತ್ತರ ಪರೀಕ್ಷೆಗೆ ಹೂಳಲಾಗಿರುವ ದೇಹವನ್ನು ಮತ್ತೆ ಹೊರ ತೆಗೆಯುವ ಪ್ರಕ್ರಿಯೆ ನಡೆಯುತ್ತಿದೆ.