ಶಿಗ್ಗಾಂವಿ(ಗ್ರಾ): ಕೇಬಲ್ ತುಂಡಾದ ವಿಷಯಕ್ಕೆ ಸಂಬಂಧಿಸಿದಂತೆ ದಲಿತ ವ್ಯಕ್ತಿ ಮೇಲೆ ಐವರು ಹಲ್ಲೆ ನಡೆಸಿದ ಘಟನೆ ಹಿನ್ನೆಲೆಯಲ್ಲಿ ಡಿವೈಎಸ್ಪಿ ಜೆ. ಮಂಜುನಾಥ ನೇತೃತ್ವದ ಅಧಿಕಾರಿಗಳ ತಂಡ ದೌರ್ಜನ್ಯಕ್ಕೊಳಗಾದ ತಾಲೂಕಿನ ಮೂಕಬಸರಿಕಟ್ಟಿ ಗ್ರಾಮದ ರಾಮಪ್ಪ ಹರಿಜನ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ನಂತರ ಗ್ರಾಮದ ಮಾಯಮ್ಮದೇವಿ ದೇವಸ್ಥಾನದಲ್ಲಿ ಗ್ರಾಮಸ್ಥರು ಮತ್ತು ದಲಿತ ಮುಖಂಡರ ಸಭೆ ನಡೆಸಿ ಮಾಹಿತಿ ಸಂಗ್ರಹಿಸಿದ ಡಿವೈಎಸ್ಪಿ ಜಿ. ಮಂಜುನಾಥ, ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಮೇಲು- ಕೀಳು ಎಂಬ ಭೇದ- ಭಾವ ಇಲ್ಲ. ಎಲ್ಲರೂ ಸಮಾನರು. ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಏನಾದರೂ ಘಟನೆ ನಡೆದರೆ ಪೊಲೀಸರ ಗಮನಕ್ಕೆ ತರಬೇಕು. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಗ್ರಾಮದ ಮುಖಂಡರು ನಿಗಾ ವಹಿಸಬೇಕು ಎಂದರು.
ಸಿಪಿಐ ಸುರೇಶ ಕುಂಬಾರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸರಸ್ವತಿ ಗಜಕೋಶ, ಪಿಎಸ್ಐ ನಿಂಗಪ್ಪ ಕರಕನ್ನವರ, ಗ್ರಾಪಂ ಸದಸ್ಯ ಸೋಮಣ್ಣ ಹಿತ್ತಲಮನಿ, ದಲಿತ ಮುಖಂಡರಾದ ಬಸವರಾಜ ಕಟ್ಟಿಮನಿ, ಡಾ. ಮಲ್ಲೇಶಪ್ಪ ಹರಿಜನ, ಹಣಮಂತಪ್ಪ ಹರಿಜನ, ಕರೆಪ್ಪ ಕಟ್ಟಿಮನಿ, ಸುರೇಶ ಹರಿಜನ, ಬಸವರಾಜ ಹರಿಜನ, ಈಶ್ವರ ಬಡಿಗೇರಿ, ಸುಭಾಸ ಮಲ್ಲಾಡದ, ನಿಸಾರಅಹ್ಮದ್ ಬುಡ್ಡೇಸಾಬನವರ, ಬಂಕಣ್ಣ ಗಂಗಣ್ಣವರ, ಕಾಶಿನಾಥ ಗಾಮನಗಟ್ಟಿ ಇದ್ದರು.