ಜಿಲ್ಲೆ

ದಾಲಪಟ ಸಂಘದ ಜಾನಪದ ಸಂಭ್ರಮ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಗೋಪನಕೊಪ್ಪ ಮಹಾಲಕ್ಷ್ಮೀ ಬಡಾವಣೆಯ ಶ್ರೀ ಚಾಮುಂಡೇಶ್ವರಿ ದಾಲಪಟ ಕಲಾವಿದರ ಸಂಘದ 9ನೇ ವಾರ್ಷಿಕೋತ್ಸವ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಧಾರವಾಡದ ಸಾಂಸ್ಕೃತಿಕ ಸಮುಚ್ಚಯ ಸಭಾಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜಾನಪದ ಸಂಭ್ರಮ ನೋಡುಗರ ಮನಸೂರೆಗೊಂಡಿತು.

ಹಿರಿಯ ಕಲಾವಿದರಾದ ಶಂಕ್ರಪ್ಪ ಮಾದರ, ನಾಗಪ್ಪ ಕುಂಬಾರ, ಅರ್ಜುನ ಮಾದರ, ಕೋಟೇಶ ಉಳ್ಳಿ ಇತರರು ಅನೇಕ ಕಲಾ ಪ್ರಕಾರಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಜಗ್ಗಲಗಿ, ಜಾನಪದ ನೃತ್ಯ, ಕೋಲಾಟ, ಲಂಬಾಣಿ ನೃತ್ಯ, ಭಜನಾ ಪದ, ಡೊಳ್ಳು ಕುಣಿತ ಮತ್ತು ದಾಲಪಟ ಸಂಗೀತ ಕಾರ್ಯಕ್ರಮಗಳು ನಡೆದವು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಮಾತನಾಡಿ, ದಾಲಪಟ ಕಲಾವಿದರ ವಿವಿಧ ಕಲಾ ಪ್ರಕಾರಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.