ಬೈಲಕುಪ್ಪೆಯ ಲಾಮಾ ಕ್ಯಾಂಪಿನ ಸೆರೆಮೆ ಪ್ರಾರ್ಥನಾ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಬೌದ್ಧ ಬಿಕ್ಕುಗಳಿಗೆ ಪ್ರವಚನ ನಡೆಸಿಕೊಟ್ಟ ದಲೈಲಾಮ. 
ಜಿಲ್ಲೆ

ಬೌದ್ಧ ಬಿಕ್ಕುಗಳಿಗೆ ದಲೈಲಾಮ ಪ್ರವಚನ

ರವಿಕುಮಾರ್ ಪಿ. ಕೆ

ಬೈಲಕುಪ್ಪೆ: ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆಯ ಲಾಮಾ ಕ್ಯಾಂಪ್ ಸೆರೆಮೆ ಮಂದಿರದ ಆವರಣದಲ್ಲಿ ಬುಧವಾರ ಬೌದ್ಧಬಿಕ್ಕುಗಳಿಗೆ ದಲೈಲಾಮ ಪ್ರವಚನ ನಡೆಸಿಕೊಟ್ಟರು.

ಮಂದಿರದಲ್ಲಿ ಆಯೋಜಿಸಿದ್ದ ವಿಶೇಷ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ ಅವರು, ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರವಚನ ನೀಡಿದರು. ಬಳಿಕ ವಾಸ್ತವ್ಯ ಹೂಡಿರುವ ಬೈಲಕುಪ್ಪೆ ಗ್ರಾಪಂ ವ್ಯಾಪ್ತಿಯ ಲಕ್ಷ್ಮೀಪುರ ತಶಿ ಲಿಂಪೋ ಮೊನೋಶಿಟ್ರಿ ಪ್ರಾರ್ಥನಾ ಮಂದಿರಕ್ಕೆ ತೆರಳಿ ವಿಶ್ರಾಂತಿ ಪಡೆದರು. ಹುಣಸೂರಿನ ಡಿವೈಎಸ್ಪಿ ಗೋಪಾಲಕೃಷ್ಣ ಅವರ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.