ಹಳೆಯಂಗಡಿ: ಎಂಆರ್‌ಪಿಎಲ್‌ನಲ್ಲಿ ಬುಧವಾರ ಸಂಭವಿಸಿದ ಅವಘಡದಲ್ಲಿ ಹಳೆಯಂಗಡಿ ಕೊಳುವೈಲು ಮಿಷನ್ ಕಾಂಪೌಂಡ್ ನಿವಾಸಿ ಮನೀಶ್ ಕರ್ಕಡ(26) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಹಳೆಯಂಗಡಿಯ ಆಲ್ಫ್ರೆಡ್ ಕರ್ಕಡ ಹಾಗೂ ಸುನೀತಾ ಕರ್ಕಡ ಅವರ ಅವಳಿ-ಜವಳಿ ಪುತ್ರರಲ್ಲಿ ಮನೀಶ್ ಕರ್ಕಡ, ಅನೀಶ್ ಕರ್ಕಡ ಇಬ್ಬರೂ ಎಂಆರ್‌ಪಿಎಲ್‌ನಲ್ಲಿ ಇಲೆಕ್ಟ್ರಿಕ್ ಡಿಪಾರ್ಟ್‌ಮೆಂಟ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮನೀಶ್ ತಂದೆ ಆಲ್ಫ್ರೆಡ್ ಕರ್ಕಡ ಸುರತ್ಕಲ್‌ನಲ್ಲಿ ಟ್ರಾವೆಲ್ ಏಜೆನ್ಸಿ ಅಂಗಡಿ ನಡೆಸುತ್ತಿದ್ದಾರೆ.