ದಕ್ಷಿಣ ಕನ್ನಡ

ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ

ಪಾಲಕ್ಕಾಡಿನ ವಲ್ಲಪುಳ ತೆಚ್ಚಿಕ್ಕಾಟಿಲ್ ಕರುವಾಟ್ಟೂರ್ ನಿವಾಸಿ

ಕಾಸರಗೋಡು: ತಿರುವನಂತಪುರದಿಂದ ಮಂಗಳೂರಿಗೆ ತೆರಳುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ತಲೆಕೊಟ್ಟು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಪಳ್ಳಂನಲ್ಲಿ ನಡೆದಿದೆ. ಘಟನಾ ಸ್ಥಳದಲ್ಲಿ ಸಿಕ್ಕಿದ ಪರ್ಸ್‌ನಲ್ಲಿದ್ದ ಆಧಾರ್ ಕಾರ್ಡ್‌ನ ವಿಳಾಸದನ್ವಯ ಮೃತ ಯುವಕನನ್ನು ಪಾಲಕ್ಕಾಡಿನ ವಲ್ಲಪುಳ ತೆಚ್ಚಿಕ್ಕಾಟಿಲ್ ಕರುವಾಟ್ಟೂರ್ ನಿವಾಸಿ ಟಿ.ಜಿತಿನ್(26) ಎಂದು ಗುರುತಿಸಲಾಗಿದೆ.

ಮೊಬೈಲ್ ಫೋನ್ ಪತ್ತೆಯಾಗಿದ್ದು ಅದರಲ್ಲಿ ಮೃತಪಟ್ಟ ಯುವಕನದ್ದೆಂದು ಸಂಶಯಿಸಲಾಗಿರುವ ಹಲವು ಫೋಟೋಗಳಿವೆ. ಲೋಕೋ ಪೈಲಟ್ ನೀಡಿದ ಮಾಹಿತಿಯಂತೆ ನಗರಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಮೃತದೇಹವನ್ನು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.