Death 
ದಕ್ಷಿಣ ಕನ್ನಡ

ಮರ ಕತ್ತರಿಸುವಾಗ ರೆಂಬೆ ಬಿದ್ದು ಕಾರ್ಮಿಕ ಮೃತ್ಯು

ರಾಜಾಪುರ ಠಾಣೆಯಲ್ಲಿ ಪ್ರಕರಣ ದಾಖಲು

ಕಾಸರಗೋಡು: ಮರ ತುಂಡರಿಸುತ್ತಿದ್ದಾಗ ರೆಂಬೆ ಮೈಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ ಬಂದಡ್ಕ ಪಡ್ಪು ನಡುವಿಲ್ ಪುರಕ್ಕಲ್ ನಿವಾಸಿ ಶ್ರೀಶ್ ಕುಮಾರ್ (59) ಮೃತಪಟ್ಟಿದ್ದಾರೆ.

ಪಾಣತ್ತೂರು ಚಾಮುಂಡಿಕುನ್ನು ಒಟ್ಟಮಲ ಚೇನೂರ್ ಎಂಬಲ್ಲಿ ವ್ಯಕ್ತಿಯೊಬ್ಬರ ಹಿತ್ತಿನಲ್ಲಿ ಮರ ಕಡಿಯುತ್ತಿದ್ದ ವೇಳೆ ರೆಂಬೆ ಬಿದ್ದು ಶ್ರೀಶ್ ಕುಮಾರ್ ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ರಾಜಾಪುರಂ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.