wild elephant Wild Elephant Attack
ದಕ್ಷಿಣ ಕನ್ನಡ

ಮುಖಾರಿಮೂಲೆಯಲ್ಲಿ ಕಾಡಾನೆ ಹಾವಳಿ

ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ ವ್ಯಾಪ್ತಿ

ಪುತ್ತೂರು ಗ್ರಾಮಾಂತರ: ಕಳೆದ ಕೆಲ ದಿನಗಳಿಂದ ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ ವ್ಯಾಪ್ತಿಯಲ್ಲಿ ಕೃಷಿ ಹಾನಿ ಮಾಡುತ್ತಿದ್ದ ಕಾಡಾನೆ ಇದೀಗ ಪಕ್ಕದ ಮಾಡ್ನೂರು ಗ್ರಾಮದ ಮುಖಾರಿಮೂಲೆಗೂ ಲಗ್ಗೆಯಿಟ್ಟಿದೆ.

ಮುಖಾರಿಮೂಲೆ ವ್ಯಾಪ್ತಿಯ ಕೃಷಿಕರಾದ ಹಸೈನಾರ್ ಮತ್ತು ಇಬ್ರಾಹಿಂ ಅವರ ತೋಟಗಳಿಗೆ ನುಗ್ಗಿ ಕೃಷಿ ಹಾನಿ ಮಾಡಿದ್ದ ಕಾಡಾನೆ ಗುರುವಾರ ರಾತ್ರಿ ಮತ್ತೆ ದಾಳಿ ನಡೆಸಿ ತೆಂಗು, ಅಡಿಕೆ ಮರಗಳನ್ನು ಮುರಿದು ಹಾಕಿದೆ. ಅಬ್ದುಲ್ ರರಝಾಕ್ ಅವರ ತೋಟದಲ್ಲಿ ತೆಂಗಿನ ಮರವನ್ನು ಮುರಿದು ಹಾಕಿದ್ದು, ನೀರಾವರಿ ವ್ಯವಸ್ಥೆಯ ಸ್ಪ್ರಿಂಕ್ಲರ್‌ಗಳನ್ನು ಧ್ವಂಸಗೊಳಿಸಿದೆ. ಕಳೆದ ಎರಡು ದಿನಗಳಿಂದ ನಿರಂತರ ಕಾಡಾನೆ ದಾಳಿಯಿಂದ ಕಂಗೆಟ್ಟಿರುವ ಕೃಷಿಕರು ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.