ಹೆಲಿಕಾಪ್ಟರ್ 
ದಕ್ಷಿಣ ಕನ್ನಡ

ಪತ್ನಿ ಸೀಮಂತಕ್ಕೆ ಹೆಲಿಕಾಪ್ಟರ್‌ನಲ್ಲಿ ಅಚ್ಚರಿಯ ಹೂವಿನ ಸುರಿಮಳೆ

ಮಂಗಳೂರು : ಪತ್ನಿ ಅಂದ್ರೆ ಪತಿಗೆ ಇಷ್ಟ. ಹೀಗಾಗಿ ತನ್ನ ಪತ್ನಿಯನ್ನು ಖುಷಿಪಡಿಸಲು ಪತಿ ಚಿನ್ನ, ಕಾರು, ವಸ್ತ್ರ ಮೊದಲಾದ ವಸ್ತು ರೂಪದ ಉಡುಗೊರೆ ನೀಡುವುದು ಸಾಮಾನ್ಯ. ಆದರೆ ಇಲ್ಲೊಬ್ಬರು ವಿನೂತನವಾಗಿ ಪತ್ನಿಯ ಸೀಮಂತ ಕಾರ್ಯಕ್ರಮಕ್ಕೆ ಹೆಲಿಕಾಫ್ಟ್‌ರನಲ್ಲಿ ಹೂವಿನ ಮಳೆಗೈದು ಅಚ್ಚರಿಯ ಉಡುಗೊರೆ ನೀಡಿರುವುದು ಗಮನ ಸೆಳೆದಿದೆ.
ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ಗುರುವಾರ ಉದ್ಯಮಿ ಪ್ರಕಾಶ್ ಕುಂಪಲ ಅವರ ಪತ್ನಿ ಅರ್ಪಿತಾ ಅವರ ಸೀಮಂತಕ್ಕೆ ಅವರು ಹೆಲಿಕಾಪ್ಟರ್ ಮೂಲಕ ಹೂವಿನ ಸುರಿಮಳೆಗೈದು ಸಂಭ್ರಮಿಸಿದ್ದಾರೆ. ಮಧ್ಯಾಹ್ನ 1.35ರ ವೇಳೆಗೆ ಆಗಮಿಸಿದ ಹೆಲಿಕಾಫ್ಟರ್ 3.15ರ ವೇಳೆಗೆ ಹಿಂತಿರುಗಿದೆ. ಸೀಮಂತ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಈ ದೃಶ್ಯವನ್ನು ಕಂಡು ಸಂತೋಷ ಪಟ್ಟರು. ಅದ್ದೂರಿ ಸೀಮಂತ ಕಾರ್ಯಕ್ರಮಗಳಲ್ಲಿ ರಾಜ್ಯದ ಇತರ ಕಡೆಗಳಲ್ಲಿ ಹೆಲಿಕಾಫ್ಟರ್‌ನಲ್ಲಿ ಹೂವು ಮಳೆ ಸುರಿಸುವುದು ಸಾಮಾನ್ಯವಾಗಿದ್ದರೂ, ಕರಾವಳಿಯಲ್ಲಿ ಇದೇ ಮೊದಲು ಎಂದು ಹೇಳಲಾಗುತ್ತಿದೆ.