ಕಡಬ ಪಪಂ ಅಧ್ಯಕ್ಷೆ ತಮನ್ನಾ ಜಬೀನ್ ನೀರಿನ ಘಟಕ ಉದ್ಘಾಟಿಸಿದರು. ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಶ್ ಪಿ.ಕೆ., ಕಡಬ ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಂ.ಹನೀಫ್, ಉಪಾಧ್ಯಕ್ಷೆ ನೀಲಾವತಿ ಶಿವರಾಂ, ಕಡಬ ಆರಕ್ಷಕ ಠಾಣಾ ಉಪನಿರೀಕ್ಷಕ ಜಂಬೂರಾಜ್ ಮಹಾಜನ್ ಮೊದಲಾದವರು ಉಪಸ್ಥಿತರಿದ್ದರು.  
ದಕ್ಷಿಣ ಕನ್ನಡ

ಆಟೋ ಚಾಲಕರಿಂದ ಸಮಾಜಮುಖಿ ಕಾರ್ಯ : ತಮನ್ನಾ ಜಬೀನ್

ಕಡಬದ ಕದಂಬ ಆಟೋ ಚಾಲಕ ಮಾಲೀಕರ ಸಂಘ ನೇತೃತ್ವದಲ್ಲಿ ಊರ ದಾನಿಗಳ ನೆರವಿನೊಂದಿಗೆ ಕಡಬ ಪಪಂ ಸಹಕಾರದಲ್ಲಿ ಆಟೋ ನಿಲ್ದಾಣದಲ್ಲಿ ಅಳವಡಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು
.
ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್ ಪಿ.ಕೆ., ಕಡಬ ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಂ.ಹನೀಫ್, ಉಪಾಧ್ಯಕ್ಷೆ ನೀಲಾವತಿ ಶಿವರಾಂ, ಕಡಬ ಆರಕ್ಷಕ ಠಾಣಾ ಉಪನಿರೀಕ್ಷಕ ಜಂಬೂರಾಜ್ ಮಹಾಜನ್, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸೈಯದ್ ಮೀರಾ ಸಾಹೇಬ್, ಗ್ರಾಪಂ ಮಾಜಿ ಸದಸ್ಯ ಆದಂ ಕುಂಡೊಳಿ, ಉದ್ಯಮಿಗಳಾದ ಅಬ್ಬಾಸ್, ದಯಾನಂದ ಗೌಡ ಆರಿಗ, ಕಿಶನ್‌ಕುಮಾರ್ ರೈ ಪೆರಿಯಡ್ಕ, ತಿರುಮಲೇಶ್ವರಿ ಹೆಗ್ಡೆ, ಮಧುರ ಟೂರಿಸ್ಟ್ ಟೆಂಪೊ ಚಾಲಕ ಮಾಲೀಕರ ಸಂಘ ಗೌರವಾಧ್ಯಕ್ಷ ಸತೀಶ ನಾಯ್ಕ ಮೇಲಿನ ಮನೆ, ಅಧ್ಯಕ್ಷ ಬಶೀರ್ ಕಳಾರ ಮೊದಲಾದವರು ಅತಿಥಿಗಳಾಗಿ ಆಗಮಿಸಿದ್ದರು. ಆಟೋ ಚಾಲಕ ಮಾಲೀಕ ಸಂಘ ಉಪಾಧ್ಯಕ್ಷ ಕರೀಂ ಹೊಸಮಠ, ಕೋಶಾಧಿಕಾರಿ ಉಮೇಶ್ ಪೂಜಾರಿ ಪೆಲತ್ತೋಡಿ, ಪದಾಧಿಕಾರಿಗಳು ಉಪಸ್ಥಿತರಿದ್ದರು. ಕದಂಬ ಆಟೋ ಚಾಲಕ ಮಾಲೀಕ ಸಂಘದ ನಿಕಟಪೂರ್ವ ಅಧ್ಯಕ್ಷ ಚೆನ್ನಪ್ಪ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯದರ್ಶಿ ರಮೇಶ್ ರೈ ಅರ್ಪಾಜೆ ನಿರೂಪಿಸಿದರು. ಅಧ್ಯಕ್ಷ ಪ್ರಸಾದ್ ಗೌಡ ಹಳೇ ಸ್ಟೇಷನ್ ವಂದಿಸಿದರು.