ಈದ್ ಮಿಲಾದ್ ಶಾಂತಿಸಭೆಯಲ್ಲಿ ವಿಟ್ಲ ಠಾಣೆ ಪೊಲೀಸ್ ನಿರೀಕ್ಷಕ ಪ್ರಕಾಶ್ ದೇವಾಡಿಗ ಮಾತನಾಡಿದರು. ಉಪನಿರೀಕ್ಷಕರಾದ ರತನ್ ಕುಮಾರ್, ಬಿ.ಎಸ್.ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
- ಎಸ್‌ಐ ಪ್ರಕಾಶ್ ದೇವಾಡಿಗ ಮಾಹಿತಿ
- ಈದ್ ಮಿಲಾದ್ ಶಾಂತಿಸಭೆ
ವಿಟ್ಲ: ಜನರ ಸುರಕ್ಷೆಗಾಗಿ ಪೊಲೀಸ್ ಚೆಕ್‌ಪೋಸ್ಟ್‌ಗಳನ್ನು ಹಾಕಲಾಗುತ್ತದೆ. ದ್ವಿಚಕ್ರ ವಾಹನದಲ್ಲಿ ತ್ರಿಬಲ್ ರೈಡಿಂಗ್‌ಗೆ ಕಡಿವಾಣ ಹಾಕಬೇಕು. ಸೀಟ್ ಬೆಲ್ಟ್, ಹೆಲ್ಮೆಟ್ ಧರಿಸದೆ ಸಂಚಾರ ಸೇರಿದಂತೆ ಸಂಚಾರ ನಿಮಯ ಉಲ್ಲಂಸುವವರ ಮೇಲೆ ಸಿಸಿ ಕ್ಯಾಮರಾಗಳ ಮೂಲಕ ನಿಗಾ ಇಡಲಾಗಿದ್ದು, ನಿಯಮ ಉಲ್ಲಂಸುವವರ ಮನೆಗೆ ನೋಟಿಸ್ ಕಳುಹಿಸಲಾಗುತ್ತದೆ. ರಾತ್ರಿ ೧೦ ಗಂಟೆಯ ಬಳಿಕ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಪೊಲೀಸ್ ನಿರೀಕ್ಷಕ ಪ್ರಕಾಶ್ ದೇವಾಡಿಗ ಹೇಳಿದರು.
ಈದ್ ಮಿಲಾದ್ ಪ್ರಯುಕ್ತ ವಿಟ್ಲ ಪೊಲೀಸ್ ಠಾಣೆಯಲ್ಲಿ ಶಾಂತಿಸಭೆಯಲ್ಲಿ ಮಾತನಾಡಿದರು. ಮೆರವಣಿಗೆ, ಕಾಲ್ನಡಿ, ವಾಹನ ಜಾಥಾ ನಡೆಸಲು ಕಡ್ಡಾಯವಾಗಿ ಅನುಮತಿ ಪಡೆಯಬೇಕು. ೧೦೦ ಮಂದಿ ಸೇರುವ ಕಟ್ಟಡಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾ ಇರಬೇಕೆಂಬ ನಿಯಮವಿದೆ. ಈ ನಿಟ್ಟಿನಲ್ಲಿ ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಲಾಗುತ್ತಿದೆ ಎಂದರು.
ಉಪನಿರೀಕ್ಷಕರಾದ ರತನ್ ಕುಮಾರ್, ಬಿ.ಎಸ್.ನಾಯಕ್ ಮೊದಲಾದವರು ಉಪಸ್ಥಿತರಿದ್ದರು.