ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ವಿಟ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಸುಜಾತ ಎಂ.ಕೆ. ಉದ್ಘಾಟಿಸಿದರು. ಕಸಾಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ, ನಿವೃತ್ತ ಮುಖ್ಯಶಿಕ್ಷಕ ಎಸ್.ಪಶುಪತಿ ಶಾಸ್ತ್ರಿ ಇದ್ದರು.  
ದಕ್ಷಿಣ ಕನ್ನಡ

ವಿದ್ಯಾರ್ಥಿಗಳು ಎಳೆಯಬೇಕು ಸಾಹಿತ್ಯದ ರಥ VITTAL

ಕಸಾಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಅಭಿಮತ | ದತ್ತಿ ನಿಧಿ ಉಪನ್ಯಾಸ

ವಿಟ್ಲ: ಗ್ರಾಮೀಣ ಭಾಗಕ್ಕೆ ಸಾಹಿತ್ಯ ಪರಿಷತ್ತನ್ನು ತಲುಪಿಸಬೇಕೆಂಬ ನಿಟ್ಟಿನಲ್ಲಿ ದತ್ತಿ ನಿಧಿ ಕಾರ್ಯಕ್ರಮ, ವಿವಿಧ ಸಮ್ಮೇಳನಗಳ ಮೂಲಕ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಮಾಡಲಾಗಿದೆ. ಸಾಹಿತ್ಯದ ಸೇವೆಯಿಂದ ಉನ್ನತ ಸ್ಥಾನಕ್ಕೇರಬಹುದು. ಅನುಭವಗಳಿಂದ ಸಾಹಿತ್ಯದ ಅರಿವು ಹೆಚ್ಚಾಗುತ್ತದೆ. ಸಾಹಿತ್ಯದ ರಥವನ್ನು ವಿದ್ಯಾರ್ಥಿಗಳು ಎಳೆಯಬೇಕು ಎಂದು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ವಿಟ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಟ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಸುಜಾತಾ ಎಂ.ಕೆ. ಉದ್ಘಾಟಿಸಿದರು.

ಪುತ್ತೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ ಮಾತನಾಡಿ, ಅಕ್ಷರವು ಪುಸ್ತಕದಿಂದ ಮಸ್ತಕಕ್ಕೆ ಹೋಗುವುದಲ್ಲ, ಅಂತರಂಗವನ್ನು ತಲುಪಬೇಕು. ನಮ್ಮನ್ನು ನಾವು ಪ್ರಶ್ನಿಸುವ ಜತೆಗೆ ಸಮಾಜದ ಏಳಿಗೆಗೆ ಪ್ರತಿಯೊಬ್ಬರೂ ಶ್ರಮಿಸಬೇಕು. ಸಾಹಿತ್ಯ ಕೃತಿ ಸಮಾಜದಲ್ಲಿ ಪರಿವರ್ತನೆಗೆ ಕಾರಣವಾಗುತ್ತದೆ ಎಂದರು.

ಐಕ್ಯುಎಸಿ ಸಂಯೋಜಕಿ ಮಾಳವಿಕಾ ಕ್ಯಾತೆರಿನ್ ಬಲ್ಮಿ ಉಪಸ್ಥಿತರಿದ್ದರು. ಕಾಲೇಜು ಭಾಷಾ ಮುಖ್ಯಸ್ಥ ಕೆ.ಓಂಪ್ರಕಾಶ್ ಸ್ವಾಗತಿಸಿದರು. ವಿದ್ಯಾರ್ಥಿನಿಗಳಾದ ರಿಷಿತಾ ವಂದಿಸಿದರು. ಯಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.

ಸಾಹಿತ್ಯ ಜನರಿಗೆ ಹಿತವನ್ನು ನೀಡುತ್ತದೆ. ಹಿಂದೆ ದೇವರನ್ನು ತೃಪ್ತಿಪಡಿಸುವುದಕ್ಕಾಗಿ ಹಾಡುವುದು, ನೃತ್ಯ ಮಾಡುತ್ತಿದ್ದರು. ಅರ್ಥ ಹಾಗೂ ಪದ್ಯವನ್ನು ಒಟ್ಟಾಗಿ ಯಕ್ಷಗಾನ ಸಾಹಿತ್ಯದಲ್ಲಿ ಕಾಣಬಹುದು. ಕವಿಯಲ್ಲಿ ಪ್ರೌಢಿಮೆ ಇರಬೇಕು. ಕಾಲ್ಪನಿಕತೆ ಇದ್ದಾಗ ಸನ್ನಿವೇಶಕ್ಕೆ ಮಹತ್ವ ಬರುತ್ತದೆ.
ಎಸ್.ಪಶುಪತಿ ಶಾಸ್ತ್ರಿ, ನಿವೃತ್ತ ಮುಖ್ಯಶಿಕ್ಷಕ