ಗ್ಯಾಸ್ ಸಿಲಿಂಡರ್ ಸೋಟದ ಬಿರುಸಿಗೆ ಅಡುಕೋಣೆ ಧ್ವಂಸಗೊಂಡಿರುವುದು. 
ದಕ್ಷಿಣ ಕನ್ನಡ

ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸೋಟ VITTAL

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • ಅಡುಗೆಕೋಣೆ ಪೂರ್ಣ ಧ್ವಂಸ
  • ಮೂವರು ಅಪಾಯದಿಂದ ಪಾರು
ವಿಟ್ಲ: ಕುರುಂಬಳದ ಎ.ಹಮೀದ್ ಎಂಬುವರ ಮನೆಯಲ್ಲಿ ಭಾನುವಾರ ಬೆಳಗ್ಗೆ ಗ್ಯಾಸ್ ಸಿಲಿಂಡರ ಸೋಟಗೊಂಡು ಮನೆಯ ಗೋಡೆ ಸಹಿತ ಅಡುಗೆಕೋಣೆ ಸಂಪೂರ್ಣ ಹಾನಿಯಾಗಿದೆ.
ಹಮೀದ್ ಪೇಟೆಗೆ ತೆರಳಿದ್ದ ಸಂದರ್ಭ ಅವರ ಪತ್ನಿ ಖೈರುನ್ನಿಸಾ ಅಡುಗೆ ಕೋಣೆಯಲ್ಲಿ ಕೆಲಸ ಮಾಡುತ್ತಿದ್ದರು. ಆಗ ಗ್ಯಾಸ್ ಸಿಲಿಂಡರ್‌ನ ರೆಗ್ಯುಲೇಟರ್ ಬಳಿ ಬೆಂಕಿ ಕಾಣಿಸಿಕೊಂಡಿದೆ. ಖೈರುನ್ನಿಸಾ ಬೊಬ್ಬೆ ಹೊಡೆದಿದ್ದನ್ನು ಕೇಳಿಸಿಕೊಂಡ ನೆರೆಮನೆಯ ಉಮ್ಮರ್ ಎಂಬುವರು ತೋಟದಿಂದ ಓಡಿ ಬಂದು ಮನೆಯೊಳಗಿದ್ದ ಖೈರುನ್ನಿಸಾ, ಹಮೀದ್ ಅವರ ತಾಯಿ ಹಾಗೂ ೯ ವರ್ಷದ ಬಾಲಕನನ್ನು ಅಂಗಳಕ್ಕೆ ಕರೆದೊಯ್ದಿದ್ದಾರೆ.
ಇದಾದ ಕೆಲವೇ ಕ್ಷಣಗಳಲ್ಲಿ ಸಿಲಿಂಡರ್ ಸೋಟಗೊಂಡಿದೆ. ಸೋಟದ ತೀವ್ರತೆಗೆ ಮನೆಯ ಗೋಡೆಗಳು ಬಿರುಕು ಬಿಟ್ಟು, ಅಡುಗೆ ಕೋಣೆ ಸಂಪೂರ್ಣ ಧ್ವಂಸಗೊಂಡಿದೆ. ಮನೆಯಲ್ಲಿದ್ದ ಗೃಹಬಳಕೆ ವಸ್ತುಗಳು, ದಾಖಲೆ ಹಾಗೂ ಪೀಠೋಪಕರಣಗಳು ಸುಟ್ಟುಹೋಗಿವೆ.
ವಿಟ್ಲದ ಏಜೆನ್ಸಿಯೊಂದು ವಿತರಿಸುವ ಗ್ಯಾಸ್ ಸಿಲಿಂಡರ್‌ಗಳು ಈಗಾಗಲೇ ಹಲವು ಕಡೆ ಸೋಟಗೊಂಡ ಘಟನೆ ನಡೆದಿದೆ. ಬಳಿಕ ಅಽಕಾರಿಗಳು ಪ್ರಕರಣವನ್ನು ಮುಚ್ಚಿ ಹಾಕಿದ್ದರು ಎಂಬ ಆರೋಪವೂ ಕೇಳಿ ಬಂದಿತ್ತು.