ವಿಟ್ಲದಲ್ಲಿ ಬೆಂಕಿಗೆ ಆಹುತಿಯಾಗಿರುವ ಅಂಗಡಿಗಳು. 
ದಕ್ಷಿಣ ಕನ್ನಡ

ವಿಟ್ಲದಲ್ಲಿ ೪ ಅಂಗಡಿ ಅಗ್ನಿಗಾಹುತಿ Fire Accident

ನಿಶಾಂತ ಎನ್ ಬಿಲ್ಲಂಪದವು
ವಿಟ್ಲ: ಇಲ್ಲಿನ ಮಂಗಳೂರು ರಸ್ತೆಯ ಇಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಬುಧವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಅಕ್ಕಪಕ್ಕದ ಅಂಗಡಿಗಳಿಗೂ ವಿಸ್ತರಣೆಯಾಗಿ ನಾಲ್ಕಕ್ಕೂ ಅಧಿಕ ಅಂಗಡಿಗಳು ಸುಟ್ಟು ಕರಕಲಾಗಿವೆ.
ಸಂತೋಷ್ ಕುಮಾರ್ ಕೊಡಂಗೆ ಮಾಲೀಕತ್ವದ ಇಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ನಿಯಂತ್ರಣಕ್ಕೆ ಬಾರದ ಸ್ಥಿತಿ ತಲುಪಿತು. ಬೆಂಕಿ ವ್ಯಾಪಿಸಿ ಹೋಟೆಲ್ ಹಾಗೂ ವೈನ್‌ಶಾಪ್‌ಗೂ ಹಬ್ಬಿತು. ಇದರ ನಡುವೆ ಇದ್ದ ಟೈಲರಿಂಗ್ ಶಾಪ್, -ಸ್ಟ್‌ಫುಡ್ ಅಂಗಡಿ ಸಹಿತ ಸಣ್ಣ ಅಂಗಡಿಗಳೂ ಬೆಂಕಿಗೆ ಆಹುತಿಯಾಗಿವೆ. ಬಂಟ್ವಾಳದಿಂದ ಅಗ್ನಿಶಾಮಕವಾಹನ ಬಂದಿದ್ದು, ಬೆಂಕಿ ನಿಯಂತ್ರಣಕ್ಕೆ ಹರಸಾಹಸ ಪಡಬೇಕಾಯಿತು. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿರುವ ಹಿನ್ನೆಲೆಯಲ್ಲಿ ವಿಟ್ಲ ಪೇಟೆಯಲ್ಲಿ ವಿದ್ಯುತ್ ನಿಲುಗಡೆ ಮಾಡಲಾಯಿತು. ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಅಗ್ನಿಗಾಹುತಿಯಾಗಿವೆ.