ಸಮರ್ಪಣಂ ಕಲೋತ್ಸವ- 2026 ಕಾರ್ಯಕ್ರಮವನ್ನು ಶ್ರೀಮಜ್ಜಗದ್ಗುರು ಆನೆಗುಂದಿ ಮಹಾಸಂಸ್ಥಾನದ ಪರಮಪೂಜ್ಯ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿ ಉದ್ಘಾಟಿಸಿದರು.
ಮಂಗಳೂರು: ವಿಶ್ವಕರ್ಮ ಕಲಾ ಪರಿಷತ್ ಕಲಾವಿರ ಸಾರಥಿ ವಿಶ್ವಕರ್ಮ ಸಮಾಜದ ಕಲಾವಿದ ಸಾರಥಿಯಂತೆ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಶ್ರೀಮಜ್ಜಗದ್ಗುರು ಆನೆಗುಂದಿ ಮಹಾಸಂಸ್ಥಾನದ ಪರಮಪೂಜ್ಯ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿ ಹೇಳಿದರು.
ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಶ್ರಯದಲ್ಲಿ ಯುಗಾದಿ ಉತ್ಸವದ ಪಂಚಮಿ ದಿನದಂದು ಕ್ಷೇತ್ರದ ಆವರಣದಲ್ಲಿ ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಹಮ್ಮಿಕೊಂಡ ಸಮರ್ಪಣಂ ಕಲೋತ್ಸವ- 2026 ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸ್ವಾರ್ಥಿಯಾಗುವುದಕ್ಕಿಂತ ಸಾರಥಿಯಾಗು ಅನ್ನುವ ಮಾತಿನಂತೆ ಎಲ್ಲಾ ಸದಸ್ಯರ ಸಕ್ರಿಯ ಸಹಕಾರದಿಂದ ವಿಶ್ವಕರ್ಮ ಕಲಾ ಪರಿಷತ್ತು ಸಾರಥಿಯ ರೀತಿಯಲ್ಲಿ ಸಮಾಜದ ಕಲಾವಿದರನ್ನು ಮುನ್ನಡೆಸುತ್ತಿದೆ, ಗೃಹ ಕೈಗಾರಿಕೆಯಿಂದ ಬೃಹತ್ ಕೈಗಾರಿಕೆಯೆಡೆಗೆ ಕುಲಕಸುಬನ್ನು ಕೊಂಡೊಯ್ಯುವಲ್ಲಿ ವಿಶ್ವಕರ್ಮ ಸಮುದಾಯ ವೃತ್ತಿಪರರು ಪ್ರಯತ್ನಶೀಲರಾಗಬೇಕು ಎಂದರು.
ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸುಜ್ಞಾನ ಮೂರ್ತಿ ಕಲೋತ್ಸವಕ್ಕೆ ಚಾಲನೆ ನೀಡಿದರು. ಲೆಕ್ಕ ಪರಿಶೋಧಕ ಎಸ್.ಎಸ್ ನಾಯಕ್ ವಿಶ್ವಕರ್ಮ ಕಲಾ ಪರಿಷತ್‌ನ ನೂತನ ವೆಬ್ ಸೈಟ್‌ಗೆ ಚಾಲನೆ ನೀಡಿದರು. ವಿಶ್ವಕರ್ಮ ಕಲಾ ಪರಿಷತ್ ಅಧ್ಯಕ್ಷ ಡಾ. ಎಸ್. ಪಿ. ಗುರುದಾಸ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತಾಧಿಕಾರಿ ಕೆ.ಉಮೇಶ್ ಆಚಾರ್ಯ, ಮಾಜಿ ಸಚಿವ ರಮಾನಾಥ ರೈ, ಲೋಕೇಶ್ ಎಂ.ಬಿ ಆಚಾರ್, ಸಂಧ್ಯಾ ಲಕ್ಷ್ಮಣ ಆಚಾರ್ಯ, ಪಿ.ಎನ್ ಆಚಾರ್ಯ, ಹರಿದಾಸ್ ಎಸ್.ಪಿ. ಆಚಾರ್ಯ, ಪ್ರೊ ಜಿ.ಯಶವಂತ ಆಚಾರ್ಯ, ಸುಂದರ ಆಚಾರ್ಯ ಬೆಳುವಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರತ್ನಾವತಿ ಜೆ.ಬೈಕಾಡಿ ವರದಿ ವಾಚಿಸಿದರು. ಯಜ್ಞೇಶ್ವರ ಕೃಷ್ಣಾಪುರ ವಂದಿಸಿದರು. ದಾಮೋದರ ಶರ್ಮ, ಉದಯಭಾಸ್ಕರ್ ಸುಳ್ಯ, ವಾರುಣಿ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.
ಸಾಧಕರಿಗೆ ಸನ್ಮಾನದ ಗೌರವ
ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಲ್ಪಗುರು ಶಿಲ್ಪಿ ಶ್ರೀ ಲಕ್ಷ್ಮೀನಾರಾಯಣ ಆಚಾರ್ಯ ಕೋಟೇಶ್ವರ ಅವರಿಗೆ ವಿಶ್ವಕರ್ಮ ಕುಲತಿಲಕ ಬಿರುದು ಸಹಿತ ಭೌವನ ವಿಶ್ವಕರ್ಮ ಕಲಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಿರಿಯ ಕಲಾಸಾಧಕರಾದ ಎಸ್.ವಿ ಆಚಾರ್, ಎಸ್. ಮಂಜುನಾಥ ಆಚಾರ್ಯ, ದಾಮೋದರ ಆಚಾರ್ಯ, ಬಿ.ರವಿಶಂಕರ್, ಗುಲಾಬಿ ಪಟ್ಟಾಭಿರಾಮ ಅವರಿಗೆ ಡಾ.ಎಸ್.ಪಿ ಗುರುದಾಸ್ ಮತ್ತು ಎಸ್.ಪಿ ಹರಿದಾಸ್ ಪ್ರಾಯೋಜಕತ್ವದಲ್ಲಿ ದಿ.ಶಿವಪುರ ಪದ್ಮನಾಭ ಆಚಾರ್ಯ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿಶಿಷ್ಠ ಕಲಾ ಸಾಧಕರಾದ ದಿವಾಕರ ಆಚಾರ್ಯ ಕೋಟೆಕಾರು, ಕಲ್ಲಮುಂಡ್ಕೂರು ಶಿಲ್ಪಿ ಹರೀಶ್ ಆಚಾರ್ಯ, ಪ್ರಮೋದ್ ಸಿ.ಕೆ, ಶ್ರೀಕಾಂತ ಆಚಾರ್ಯ ಕಲ್ಚಪ್ರ, ಶಾಂತಲಾ ಸೀತಾರಾಮ ಆಚಾರ್ಯ ಅವರಿಗೆ ಪಿ.ಎನ್ ಆಚಾರ್ಯ ಅಭಿಮಾನಿ ಬಳಗ ಉಡುಪಿ ಇವರ ಪ್ರಾಯೋಜಕತ್ವದಲ್ಲಿ ಪಿ.ಎನ್ ಆಚಾರ್ಯ ಪುರಸ್ಕಾರ ಸಹಿತ ವಿಶ್ವಕರ್ಮ ಕಲಾ ಪ್ರಶಸ್ತಿ, ಯುವ ಸಾಧಕರಾದ ವಾರುಣಿ ನಾಗರಾಜ್, ಮನೋಜ್ಞ ಟಿ. ಆಚಾರ್ಯ, ಬಿಂದು ಕೆ. ಮಂಗಳೂರು, ಆಶ್ಲೇಷ್ ಆಚಾರ್ಯ ಎ.ಎಸ್, ಗಾಯತ್ರಿ ಕೆ.ಆಚಾರ್ಯ ಕೊಂಡೆವೂರು ಅವರಿಗೆ ಓಂಗುರೂಜೀ ಜ್ವುವೆಲ್ ವರ್ಕ್ಸ್ ಮಂಗಳೂರು ಇದರ ಮಾಲಕ ರಾಜಗೋಪಾಲ ಆಚಾರ್ಯ ಇವರ ಪ್ರಾಯೋಜಕತ್ವದಲ್ಲಿ ಶ್ರೀಮತಿ ಶಾಂತಾ ಸುಬ್ರಾಯ ಆಚಾರ್ಯ ಸ್ಮಾರಕ ಪುರಸ್ಕಾರ ಸಹಿತ ವಿಶ್ವಕರ್ಮ ಕಲಾ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ವಿಶ್ವದಾಖಲೆ ನಿರ್ಮಿಸಿದ ಕಲಾವಿದೆ ಕವಿತಾ ಸಂದೀಪ್ ಪಾಲ್ಕೆ ಇವರನ್ನು ಅಭಿನಂದಿಸಲಾಯಿತು.