ಮೈಸೂರು ಸಂಸ್ಥಾನದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಗೌರವಿಸಿದರು.
ಸಮ್ಮೇಳನದಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರು ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಭೀಮನಕಟ್ಟೆ ಶ್ರೀ ಮದಚ್ಯುತಪ್ರೇಕ್ಷಾಚಾರ್ಯ ಸಂಸ್ಥಾನದ ಶ್ರೀ ರಘುವರೇಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.
ಪವಮಾನ ಹೋಮ
ಮಧ್ವ ಪರಂಪರೆ ಧಾರ್ಮಿಕ ಅಭಿವೃದ್ಧಿಗೆ ಶ್ರೇಷ್ಠ ಪ್ರೇರಣೆ ನೀಡಿದೆ. ಆಧುನಿಕ ಭಾರತದಲ್ಲಿ ಧರ್ಮ ರಕ್ಷಣೆಗಾಗಿ ಧಾರ್ಮಿಕ ಕಾರ್ಯ ಮಾಡಬೇಕಾದುದು ಅಗತ್ಯ. ಭಾರತೀಯ ಪರಂಪರೆ ವಿಶ್ವಕ್ಕೆ ಮಾದರಿ. ಅದನ್ನು ಸರ್ವರೂ ಅನುಸರಿಸಬೇಕು. ಧಾರ್ಮಿಕ, ಆಧ್ಯಾತ್ಮಿಕವಾದ ಒಳ್ಳೆಯ ಸಮಾಜ ಭಾರತದಲ್ಲಿದೆ. ಆರ್ಥಿಕ ಸದೃಢತೆಯ ಸಮಾನ ಸಮಾಜ ನಿರ್ಮಾಣ ಮಾಡಬೇಕಾದುದು ಅವಶ್ಯ. ಧಾರ್ಮಿಕ ಭಾವನೆ ಪುರುಜ್ಜೀವನವಾಗುತ್ತಿದೆ ಎನ್ನುವುದು ಸಂತಸದ ವಿಚಾರ.