ಬಿ.ಸಿ.ರೋಡಿನಲ್ಲಿ ನಡೆದ ವಿಕಾಸಂ ದಿನಾಚರಣೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ ಭಟ್ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ದಿಲೀಪ್ ಚಂದ್ರ, ರೇಖಾ ಸಂಜೀವ್, ರೋಷನ್ ರೈ ಮತ್ತಿತರರು ಉಪಸ್ಥಿತರಿದ್ದರು. 
ದಕ್ಷಿಣ ಕನ್ನಡ

ದಿವ್ಯಾಂಗರ ಸೇವೆ ಶ್ರೇಷ್ಠ : ಟಿ.ಜಿ.ರಾಜಾರಾಮ ಭಟ್

ಸೌಮ್ಯ ಆರ್
ಟಿ.ಜಿ.ರಾಜಾರಾಮ ಭಟ್ ಅವರನ್ನು ಗೌರವಿಸಲಾಯಿತು. ಎಚ್.ಪಿ. ಇಂಡಿಯಾ ಸಂಸ್ಥೆಯ ಟ್ಯಾಲೆಂಟ್ ಅಕ್ವಿಸಿಶನ್ ಮುಖ್ಯಸ್ಥ ದಿಲೀಪ್ ಚಂದ್ರ ಮುಖ್ಯ ಅತಿಥಿಯಾಗಿದ್ದರು. ಎಚ್.ಪಿ.ಸಂಸ್ಥೆಯ ಇಂಕ್ಲೂಸಿವ್ ಆ್ಯಂಡ್ ಬಿಲಾಂಗಿಂಗ್ ಯೋಜನೆಯಡಿ ವಿಕಾಸಂನಲ್ಲಿ ತರಬೇತಿ ಪಡೆಯುತ್ತಿರುವ ದಿವ್ಯಾಂಗ ಮಕ್ಕಳ ಶಿಕ್ಷಣದ ಉದ್ದೇಶದಿಂದ ಕಂಪ್ಯೂಟರ್ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು.
ಪ್ರಮುಖರಾದ ರೇಖಾ ಸಂಜೀವ್, ಉದ್ಯಮಿ ರೋಷನ್ ರೈ ಮಾತನಾಡಿದರು. ಎಚ್‌ಪಿ ಸಂಸ್ಥೆಯ ದಿಲೀಪ್ ಚಂದ್ರ, ಪ್ರತಾಪ್ ಕುಮಾರ್, ವರುಣ್ ಆರ್., ರಚನ್ ಶೆಟ್ಟಿ ಹಾಗೂ ವಿನಯ್ ಕುಮಾರ್ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಂದರ್ಶನ ಕೌಶಲದ ಬಗ್ಗೆ ತರಬೇತಿ ನೀಡಿದರು.