ಅಂತರ್ ಜಿಲ್ಲಾಮಟ್ಟದ ಚೆಸ್ ಪಂದ್ಯಾಟದಲ್ಲಿ ಸಮಗ್ರ ಪ್ರಶಸ್ತಿ ಪಡೆದ ವೈಬ್ರೆಂಟ್ ಕಾಲೇಜಿನ ವಿದ್ಯಾರ್ಥಿಗಳು. 
ದಕ್ಷಿಣ ಕನ್ನಡ

ಚೆಸ್‌ನಲ್ಲಿ ವೈಬ್ರೆಂಟ್ ಚಾಂಪಿಯನ್ : ಅಂತರ್ ಜಿಲ್ಲಾಮಟ್ಟದ ಸ್ಪರ್ಧೆ

ಮೂಡುಬಿದಿರೆ: ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಅಂತರ್ ಜಿಲ್ಲಾಮಟ್ಟದ ಪಿಯು ಕಾಲೇಜು ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಮೂಡುಬಿದಿರೆ ನ್ಯೂ ವೈಬ್ರೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಪಡೆದಿದ್ದಾರೆ.

ಕಾಲೇಜಿನ ವಿದ್ಯಾರ್ಥಿಗಳಾದ ಪ್ರಥಮ ಪಿಯುಸಿಯ ಚೇತನಾ ಕುಮಾರಿ ಎಸ್. ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ, ಪ್ರಥಮ ಪಿಯುಸಿಯ ಪ್ರಜ್ವಲ್ ಎ.ಬಿ. ಬಾಲಕರ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಪ್ರಥಮ ಹಾಗೂ ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನ ದೊರೆತಿದೆ.

ಬಾಲಕರ ವಿಭಾಗದಲ್ಲಿ ಪ್ರಥಮ ಪಿಯುಸಿಯ ಪ್ರಜ್ವಲ್ ಎ.ಬಿ, ಸೌಮಿತ್ ಸುಮಂತ್ ಶಾನಭಾಗ್, ಸಂಹಿತ್ ರಾವ್, ಅಥರ್ವ ಬೋಡಸ್, ಭವೇಶ್ ಗೌಡ ಜಿ.ಎಸ್, ದ್ವಿತೀಯ ಪಿಯುಸಿಯ ಕೃಷ್ಣ ಆರ್, ಕೌಟಿಲ್ಯ ರಾಜೇ ಅರಸ್ ಟಿ.ಕೆ, ಎಸ್.ಎನ್.ಸ್ವಪ್ನಿಲ್ ಗೌಡ, ಅನುಪಮ್ ಎಸ್.ಸಾಗರ್ ಭಾಗವಹಿಸಿದರು. ಬಾಲಕಿಯರ ವಿಭಾಗದಲ್ಲಿ ಪ್ರಥಮ ಪಿಯುಸಿಯ ಧನ್ಯಾ ಜಿ.ಎ, ಚೇತನಾ ಕುಮಾರಿ ಎಸ್, ಭಾವನಾ ಜಿ, ಹೊನ್ವಿತಾ ಎಸ್, ವೈಷ್ಣವಿ ಪಿ, ಅಮೃತಾ ಎಂ.ಪಿ, ದ್ವಿತೀಯ ಪಿಯುಸಿಯ ಚೈತನ್ಯಾ ಪಿ, ಅನುಷ್ಕಾ ಆರ್, ಅನರ್ಘ್ಯ ಭಾಗವಹಿಸಿದ್ದಾರೆ.

ಸಾಧಕ ವಿದ್ಯಾರ್ಥಿಗಳನ್ನು ವೈಬ್ರೆಂಟ್ ಎಜುಕೇಷನ್-ಚಾರಿಟೆಬಲ್ ಟ್ರಸ್ಟ್ ಟ್ರಸ್ಟಿಗಳಾದ ಮೆಹಬೂಬ್ ಬಾಷಾ, ಚಂದ್ರಶೇಖರ್ ರಾಜೇ ಅರಸ್, ಯೋಗೇಶ್ ಬೆಡೆಕರ್, ಸುಭಾಷ್ ಝಾ, ಡಾ.ಎಸ್.ಎನ್.ವೆಂಕಟೇಶ್ ನಾಯಕ್, ಡಾ.ಶರತ್ ಗೋರೆ ಅಭಿನಂದಿಸಿದ್ದಾರೆ.