ಕಳೆದ 15ದಿನಗಳಿಂದ ತುಂಬೆ ಡ್ಯಾಂನಲ್ಲಿ ತುಸು ಕುಸಿತಗೊಂದ್ದರೂ, ಪ್ರಸ್ತುತ ತುಂಬೆ ಡ್ಯಾಂ ನೀರಿನ ಶೇಖರಣೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಡ್ಯಾಂನ ಮೂಲ ಶೇಖರಣಾ ಸಾಮಥ್ಯ 6ಮೀ.ಇದ್ದು, ಪ್ರಸ್ತುತ 5.5 ಮೀ. ನೀರು ಶೇಖರಣೆಗೊಂಡಿದೆ.
ಮಂಗಳೂರು: ಕಳೆದ 15ದಿನಗಳಿಂದ ತುಂಬೆ ಡ್ಯಾಂನಲ್ಲಿ ತುಸು ಕುಸಿತಗೊಂದ್ದರೂ, ಪ್ರಸ್ತುತ ತುಂಬೆ ಡ್ಯಾಂ ನೀರಿನ ಶೇಖರಣೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಡ್ಯಾಂನ ಮೂಲ ಶೇಖರಣಾ ಸಾಮಥ್ಯ 6ಮೀ.ಇದ್ದು, ಪ್ರಸ್ತುತ 5.5 ಮೀ. ನೀರು ಶೇಖರಣೆಗೊಂಡಿದೆ.
ಕಳೆದ ವರ್ಷ 5.25 ಮೀ, 2024 ರಂದು 4.91ಮೀ., 2023ರ ಇದೇ ದಿನದಂದು 5.98 ಮೀ. ಇತ್ತು. 2022, 2021ರಲ್ಲಿ ಕ್ರಮವಾಗಿ 6 ಮೀ. ಇತ್ತು. , 2020 ರಲ್ಲಿ 4.90, 2019ರಲ್ಲಿ 5.11 ಮೀ. ಇತ್ತು. ಪ್ರಸ್ತುತ ಮಂಗಳೂರು ಪಾಲಿಕೆ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆ ಕಡಿಮೆ. ಆದರೂ ಪಾಲಿಕೆಯಿಂದ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ ಕಂಟ್ರೋಲ್ ರೂಂ (0824- 2220306 ಅಥವಾ 0824- 2220303) ಗೆ ಕರೆ ಮಾಡಿದರೆ ವ್ಯವಸ್ಥೆ ಮಾಡಲಾಗುತ್ತದೆ.
170 ಎಂಎಲ್‌ಡಿ ನೀರು ಲಭ್ಯ
ದಾಖಲೆಯ ಪ್ರಕಾರ ತುಂಬೆ ಡ್ಯಾಂನಿಂದ 160 ಎಂಎಲ್‌ಡಿ ನೀರನ್ನು ಪ್ರತೀ ದಿನ ಮಂಗಳೂರಿಗೆ ಪಂಪಿಂಗ್ ಮಾಡಲಾಗುತ್ತದೆ. 80 ಎಂಎಲ್‌ಡಿ (2009ರಲ್ಲಿ ನಿರ್ಮಾಣ) ಹಾಗೂ 81.07 (1983ರಲ್ಲಿ ನಿರ್ಮಾಣ)ಎಂಎಲ್‌ಡಿಯ 2 ನೀರು ಶುದ್ಧೀಕರಣ ಘಟಕಗಳಲ್ಲಿ ನೀರು ಶುದ್ಧೀಕರಣ ಮಾಡಿ ನಗರಕ್ಕೆ ನೀರು ಸರಬರಾಜು ಮಾಡಲಾಗುತ್ತದೆ. ಇದಕ್ಕೆ ಜತೆಯಾಗಿ ಇದೀಗ 20 ಎಂಎಲ್‌ಡಿಯ ಹೊಸ ನೀರು ಶುದ್ಧೀಕರಣ ಘಟಕ ತುಂಬೆ ಡ್ಯಾಂ ಸಮೀಪದ ರಾಮಲ್‌ಕಟ್ಟೆಯಲ್ಲಿ ನಿರ್ಮಿಸಲಾಗುತ್ತಿದೆ. ಇದರಲ್ಲಿ 10 ಎಂಎಲ್‌ಡಿ ಗ್ರಾಮಾಂತರಕ್ಕೆ ಸರಬರಾಜು ಮಾಡಿದರೆ ಉಳಿದ 10 ಎಂಎಲ್‌ಡಿ ಸೇರಿ 170 ಎಂಎಲ್‌ಡಿ ನೀರು ಲಭಿಸಲಿದೆ.
ಇನ್ನಿತರ ಡ್ಯಾಂಗಳಲ್ಲೂ ನೀರು ಭರ್ತಿ
ಕೆಲವು ದಿನದ ಹಿಂದೆ ಗ್ರಾಮೀಣ ಭಾಗದಲ್ಲಿ ಮಳೆಯಾಗಿದ್ದರಿಂದ ಶಂಭೂರು ಎಎಂಆರ್ ಡ್ಯಾಂನಲ್ಲಿ ನೀರಿನ ಒಳಹರಿವು ತುಸು ಹೆಚ್ಚಾಗಿ ಗರಿಷ್ಟು 18ಮೀ.ನೀರಿದೆ. ಜತೆಗೆ ಸರಳಿಕಟ್ಟೆ ಡ್ಯಾಂ 4 ಮೀ., ಜಕ್ರಿಬೆಟ್‌ಉ ಡ್ಯಾಂ 3ಮೀ. ಹರೆಕಳ ಡ್ಯಾಂಗಳಲ್ಲಿ 1.9ಮೀ ನೀರಿದೆ. ಸಸದ್ಯಕ್ಕೆ ಗ್ರಾಮೀಣ ಭಾಗದ ಡ್ಯಾಂಗಳಲ್ಲಿ ಡ್ಯಾಂಗಳಲ್ಲೂ ನೀರು ಭರ್ತಿಯಾಗಿದೆ.
ಮಂಗಳೂರಿಗೆ ಸದ್ಯ ಕುಡಿವ ನೀರು ಕೊರತೆ ಇಲ್ಲ
ಮಂಗಳೂರು ಪಾಲಿಕೆಗೆ ಕುಡಿಯುವ ನೀರು ಪೂರೈಸುವ ತುಂಬೆ ಅಣೆಕಟ್ಟೆಯಲ್ಲಿ 30 ದಿನಗಳಿಗೆ ಸಾಕಾಗುವಷ್ಟು ನೀರು ಸಂಗ್ರಹ ಇದೆ. ಆದರೆ ಅದರ ಕೆಳಗಿನ ಹರೇಕಳ ಡ್ಯಾಂನಿಂದ ನೀರನ್ನು ಇಲ್ಲಿಗೆ ಪಂಪ್ ಮಾಡುವುದರಿಂದ ಈ ನೀರಿನ ಸಂಗ್ರಹವನ್ನು 110 ದಿನಗಳಿಗೆ ಸಾಕಾಗುವಷ್ಟು ಬಳಸಬಹುದು. ಹಾಗಾಗಿ ಸದ್ಯದ ಮಟ್ಟಿಗೆ ಮಂಗಳೂರಿಗೆ ಕುಡಿಯುವ ನೀರಿನ ಕೊರತೆ ಇಲ್ಲ ಎಂದು ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ತಿಳಿಸಿದ್ದಾರೆ.