ವಾಣಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆ ವಾರ್ಷಿಕ ಸಂಚಿಕೆ ಬಿಡುಗಡೆಗೊಳಿಸಲಾಯಿತು. 
ದಕ್ಷಿಣ ಕನ್ನಡ

ಮೌಲ್ಯಾಧಾರಿತ ಶಿಕ್ಷಣದಿಂದ ಜೀವನದ ದಿಕ್ಕು ನಿರ್ಣಯ : ಡಾ.ರಾಹುಲ್ ದೇವರಾಜ್ ಪ್ರತಿಪಾದನೆ

ವಿದ್ಯೆ ಹಾಗೂ ಹಣಕ್ಕೆ ಪ್ರತ್ಯೇಕ ಮುಖಗಳಿವೆ. ಆದ್ದರಿಂದ ಪ್ರಸ್ತುತ ಕಾಲದಲ್ಲಿ ವಿದ್ಯೆಯಿಂದ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಉತ್ತಮ ಸಂಪಾದನೆ ಮಾರ್ಗವನ್ನು ಕಂಡುಕೊಳ್ಳಬೇಕು. ವಿದ್ಯಾರ್ಥಿಯಾದವನು ತಾನು ಬೆಳೆಯುತ್ತಾ ತನ್ನ ಜತೆಗಿರುವರನ್ನು ಬೆಳೆಸುವ ಗುಣವನ್ನು ಅಳವಡಿಸಿಕೊಳ್ಳಬೇಕು. ಇಂತಹ ಗುಣವನ್ನು ರೂಡಿಸಿಕೊಂಡಲ್ಲಿ ಜೀವನ ದಾರಿ ಸುಲಭ.