ಭಿತ್ತಿಪತ್ರಿಕೆಗಳನ್ನು ಸೋನಿಯಾ ವರ್ಮ ಅನಾವರಣಗೊಳಿಸಿದರು. ಪ್ರಮುಖರಾದ ಕೇಯೂರ ವರ್ಮ, ತೃಪ್ತ ಜೈನ್, ಅರವಿಂದ್ ಮೊದಲಾದವರು ಉಪಸ್ಥಿತರಿದ್ದರು. 
ದಕ್ಷಿಣ ಕನ್ನಡ

ವಿಧೇಯತೆ ಬೋಧಿಸಿದ ಆದರ್ಶ ವ್ಯಕ್ತಿ : ಸೋನಿಯಾ ವರ್ಮ

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಪುಸ್ತಕ ವಾಚನದಲ್ಲಿ ಯಶೋವರ್ಮ ಅವರಿಗೆ ಅಪಾರವಾದ ಆಸಕ್ತಿ ಇತ್ತು. ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸಲು ಅವರು ಸದಾ ಪ್ರೋತ್ಸಾಹಿಸುತ್ತಿದ್ದರು. ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪುಸ್ತಕ ಓದಲು ಉತ್ತೇಜನ ನೀಡುವ ಉದ್ದೇಶದಿಂದ ಲೈಬ್ರರಿಯಲ್ಲಿ ಕಡ್ಡಾಯ ಓದು ನಿಯಮ ಜಾರಿಗೊಳಿಸಿದ್ದರು. ಜತೆಗೆ ವಿದ್ಯಾರ್ಥಿಗಳಿಗೆ ವಿಧೇಯತೆ, ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸಿದ ಆದರ್ಶ ವ್ಯಕ್ತಿಯಾಗಿದ್ದರು ಎಂದು ಸೋನಿಯಾ ವರ್ಮ ಹೇಳಿದರು.

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಪ್ರಾಕ್ತನ ಕಾರ್ಯದರ್ಶಿ ದಿ.ಯಶೋವರ್ಮ ಅವರ ಎಪ್ಪತ್ತರ ಜನ್ಮದಿನ ಸ್ಮರಣೆ ಅಂಗವಾಗಿ ಅವರ ಮನೆಯ ಬಳಿ ಇರುವ ಸ್ಮಾರಕದ ಮುಂದೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗ ಹಾಗೂ ಸಂಸ್ಕೃತ ಸಂಘ ವತಿಯಿಂದ ಸಂಸ್ಕೃತ ಭಾಷಾ ವಿದ್ಯಾರ್ಥಿಗಳು ರಚಿಸಿದ ಎಪ್ಪತ್ತು ಭಿತ್ತಿಪತ್ರಿಕೆಗಳನ್ನು ಅನಾವರಣಗೊಳಿಸಿ ಮಾತನಾಡಿದರು.

ಯುಶೋವರ್ಮ ಅವರ ಸ್ಮರಣೆಯಲ್ಲಿ ‘ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದಿಲ್ಲ’ ಎಂಬ ಪ್ರತಿಜ್ಞೆ ಸ್ವೀಕರಿಸಲು ಕರೆ ನೀಡಿದರು. ಎಸ್‌ಡಿಎಂ ಸಂಸ್ಥೆಗಳ ಐಟಿ, ವಸತಿ ನಿಲಯಗಳ ಕಾರ್ಯನಿರ್ವಾಹಕ ನಿರ್ದೇಶಕ ಪೂರನ್ ವರ್ಮ ಡಿಜಿಟಲ್ ಪತ್ರಿಕೆ ಬಿಡುಗಡೆಗೊಳಿಸಿದರು. ಕೇಯೂರ ವರ್ಮ, ಎಸ್‌ಡಿಎಂ ಕಲಾಕೇಂದ್ರದ ವ್ಯವಸ್ಥಾಪಕ ತೃಪ್ತ ಜೈನ್, ಮಾಧ್ಯಮಗಳ ಸಂಯೋಜಕ ಅರವಿಂದ್ ಉಪಸ್ಥಿತರಿದ್ದರು.

ಸಂಸ್ಕೃತ ಭಾಷಾ ವಿಭಾಗ ಮುಖ್ಯಸ್ಥ ಡಾ.ಪ್ರಸನ್ನಕುಮಾರ ಐತಾಳ್ ಪ್ರಾಸ್ತಾವಿಕ ಮಾತನಾಡಿದರು. ಪ್ರಗತಿ ಶೇಟ್, ರಾಮಕಿಶೋರ್, ಕಾರ್ತಿಕ್ ಡಿ.ಎಂ. ಗೌರವಿಸಿದರು. ಟಿ.ಪಿ.ಹಿತಾ ಸ್ವಾಗತಿಸಿದರು. ಸಮನ್ವಿತಾ ವಂದಿಸಿದರು. ಅಂಜನಾ ಎಂ.ಆರ್. ಕಾರ್ಯಕ್ರಮ ನಿರೂಪಿಸಿದರು.