ಉಳ್ಳಾಲ ಬೀಚ್ ಸ್ವಚ್ಛತಾ ಕಾರ್ಯಕ್ರಮಕ್ಕೆ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್ ಚಾಲನೆ ನೀಡಿದರು. 
ದಕ್ಷಿಣ ಕನ್ನಡ

ಪರಿಸರ ಸಂರಕ್ಷಣೆಯಲ್ಲಿ ಎನ್‌ಎಸ್‌ಎಸ್ ಸೇವೆ ಮಾದರಿ: ಫೌಸ್ಟಿನ್ ಲೂಕಾಸ್ ಲೋಬೋ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಶುದ್ಧ ಜಲ, ಆರೋಗ್ಯಕರ ವಾತಾವರಣ ಹಾಗೂ ಶುದ್ಧ ಗಾಳಿ ಮನುಷ್ಯನಿಗೆ ಅತ್ಯಗತ್ಯ, ಇವುಗಳನ್ನು ಕಾಪಾಡುವಲ್ಲಿ ಹೆಚ್ಚಿನ ಪಾತ್ರ ವಹಿಸಬೇಕಿದ್ದು, ಎನ್‌ಎಸ್‌ಎಸ್ ಸೇವೆ ಮಾದರಿ ಎಂದು ಮಂಗಳೂರಿನ ಫಾದರ್ ಮುಲ್ಲರ್ ಚಾರಿಟೆಬಲ್ ಸಂಸ್ಥೆ ನಿರ್ದೇಶಕ ಫಾ.ಫೌಸ್ಟಿನ್ ಲೂಕಾಸ್ ಲೋಬೋ ಹೇಳಿದರು.

ಕರಾವಳಿ ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಶನಿವಾರ ಉಳ್ಳಾಲ ಬೀಚ್ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕರಾವಳಿ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಪ್ರದೀಪ್ ಡಿಸೋಜ, ಉಳ್ಳಾಲ ನಗರಸಭೆ ಪೌರಾಯುಕ್ತ ತೇಜಮೂರ್ತಿ, ದೇರಳಕಟ್ಟೆ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಆಡಳಿತಾಧಿಕಾರಿ ಫಾ.ಡೊನಾಲ್ಡ್ ನಿಲೇಶ್ ಕ್ರಾಸ್ತಾ, ಔಷಧೀಯ ವಿಭಾಗದ ಆಡಳಿತಾಧಿಕಾರಿ ಫಾ.ನೆಲ್ಸನ್ ಧೀರಜ್ ಪಾಯಸ್, ಸಹಾಯಕ ಆಡಳಿತಾಧಿಕಾರಿ ಫಾ.ಅಶ್ವಿನ್ ಲಾರೆನ್ಸ್ ಕ್ರಾಸ್ತಾ, ಕಾಲೇಜಿನ ಪ್ರಾಂಶುಪಾಲ ಡಾ.ಇ.ಎಸ್.ಜೆ.ಪ್ರಭುಕಿರಣ್, ಉಪಪ್ರಾಂಶುಪಾಲೆ ಡಾ.ವಿಲ್ಮಾ ಮೀರಾ ಡಿಸೋಜ, ಫಾರ್ಮಸ್ಯೂಟಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಸತೀಶ್ ಎಸ್., ವೈದ್ಯಕೀಯ ಉಪಅಧೀಕ್ಷಕಿ ಡಾ.ದೀಪಾ ಪಾಯ್ಸ, ಯು.ಜಿ.ಉಸ್ತುವಾರಿ ಡಾ.ಅಮಿತಾ, ಪಿ.ಜಿ. ಉಸ್ತುವಾರಿ ಡಾ.ರಾಜಚಂದ್ರ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಮಂಜುನಾಥ್ ಶೆಟ್ಟಿ, ಕ್ಯಾ.ವಿಜಯ್ ಕುಮಾರ್, ಉಳ್ಳಾಲ ನಗರಸಭೆಯ ಪರಿಸರ ವಿಭಾಗ ಅಭಿಯಂತರ ಪುನೀತ್ ಎಂ.ಎಸ್., ಹಿರಿಯ ಆರೋಗ್ಯಾಧಿಕಾರಿಗಳಾದ ರವಿ ಕೃಷ್ಣ ಹಾಗೂ ಲಿಲ್ಲಿ ನಾಯರ್ ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಧೀರಜ್ ಫೆರ್ನಾಂಡಿಸ್ ಸ್ವಾಗತಿಸಿದರು. ಎನ್‌ಎಸ್‌ಎಸ್ ಘಟಕದ ನಾಯಕ ಪ್ರಣವ್ ವಂದಿಸಿದರು. ಸ್ವಯಂಸೇವಕ ಶ್ರೀರಾಮ್ ಕಾರ್ಯಕ್ರಮ ನಿರೂಪಿಸಿದರು.