arrest 
ದಕ್ಷಿಣ ಕನ್ನಡ

ಎಂಡಿಎಂಎ, ಗಾಂಜಾ ಸಾಗಾಟ ಇಬ್ಬರ ಬಂಧನ

ಮಂಜೇಶ್ವರ ಪೊಲೀಸರು ನಡೆಸಿದ ಕಾರ್ಯಾಚರಣೆ

ಕಾಸರಗೋಡು: ಮಾರಕ ಎಂಡಿಎಂಎ ಮತ್ತು ಗಾಂಜಾ ಹೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಮಂಜೇಶ್ವರ ಮತ್ತು ಆದೂರು ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಮುಳಿಯಾರು ಬಾವಿಕ್ಕೆರೆ ಕೆ.ಪುರಂ ಮಂಜಕ್ಕಲ್ ಜಂಕ್ಷನ್‌ನಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 5.80 ಗ್ರಾಂ ಗಾಂಜಾ ವಶಪಡಿಸಿಕೊಂಡು, ಮುಳಿಯಾರು ಬಾವಿಕ್ಕೆರೆ ಮುಂಡಕ್ಕಾಲ್ ಹೌಸ್‌ನ ಎಂ.ಎ.ಅಬ್ದುಲ್ ಸಮದ್(29) ಎಂಬಾತನನ್ನು ಬಂಧಿಸಿದ್ದಾರೆ. ಬಾವಿಕ್ಕೆರೆ ಕೆ.ಕೆ.ಪುರಂ ಮಂಜಕ್ಕಲ್ ಜಂಕ್ಷನ್‌ನಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಈತನಲ್ಲಿ ಗಾಂಜಾ ಪತ್ತೆಯಾಗಿದೆ.

ಉಪ್ಪಳ ಮಣ್ಣಂಗುಳಿ ಸ್ಟೇಡಿಯಂ ರಸ್ತೆ ಬಳಿ ಮಂಜೇಶ್ವರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 0.430 ಗ್ರಾಂ ಎಂಡಿಎಂಎ ಮತ್ತು 4.320 ಗ್ರಾಂ ಗಾಂಜಾ ಹೊಂದಿದ್ದ ವರ್ಕಾಡಿ ಪುರುಷಂಗೋಡಿಯ ಅಂಗನವಾಡಿ ಬಳಿಯ ಮೊಹಮ್ಮದ್ ರಷೀದ್(24) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.