ಪ್ರಮುಖ ಮುಖ್ಯಾಂಶಗಳು
ಮಂಗಳೂರು: ಮಂಗಳೂರುಹಾಗೂ ಹೊರವಲಯಗಳಲ್ಲಿ ಗೂಡ್ಸ್ವಾಹನಗಳಲ್ಲಿ ಮಿತಿಗಿಂತ ಉದ್ದದಸರಕುಗಳನ್ನು ಲೋಡ್ ಮಾಡಿ ಸಾಗಾಟಮಾಡುತ್ತಿರುವುದು ಅಲ್ಲಲ್ಲಿಕಂಡು ಬರುತ್ತಿವೆ.ಇದುರಸ್ತೆ ಸಂಚಾರ ಸುರಕ್ಷತೆಗೆ ಗಂಭೀರಸವಾಲಾಗಿದೆ.
ಬಹುತೇಕಸಂದರ್ಭ ಪೊಲೀಸರು ಮತ್ತು ಸಾರಿಗೆಇಲಾಖೆಯ ಕಣ್ಣು ತಪ್ಪಿಸಿ ಈ ರೀತಿಸರಕುಗಳನ್ನು ಸಾಗಾಟ ಮಾಡಲಾಗುತ್ತಿದೆ.ಸಣ್ಣಗೂಡ್ಸ್ ವಾಹನಗಳಲ್ಲಿ ಉದ್ದವಾದಕಂಬಗಳು,ಕಬ್ಬಿಣದಕಂಬಿಗಳು,ಪೈಪ್‌ಗಳು,ಗ್ರಾನೈಟ್-ಮಾರ್ಬಲ್‌ಗಳು,ಕಟ್ಟಡಸಾಮಗ್ರಿಗಳು ಮುಂತಾದವುಗಳನ್ನುಹೇರಿಕೊಂಡುಹೋಗುತ್ತಾರೆ.ಇವುವಾಹನದಿಂದ ಹೊರಕ್ಕೆ ಚಾಚಿ ಹಿಂದಿನಿಂದಬರುವ ವಾಹನಗಳಿಗೆ ಅಪಾಯಕಾರಿಯಾಗಿಪರಿಮಿಸುತ್ತಿವೆ.
ಕಾಂಕ್ರೀಟ್ಮಿಕ್ಸ್ ಮಾಡುವ ಯಂತ್ರ,ಜನರೇಟರ್ಗಳನ್ನೂ ಗೂಡ್ಸ್ ವಾಹನ ಹಿಂಭಾಗದಲ್ಲಿಸಿಕ್ಕಿಸಿಕೊಂಡು ಹೋಗುವುದು ಕೂಡಾನಿಯಮ ಬಾಹಿರ.ಬಾಡಿಗೆಮಾಡುವ ವಾಹನಗಳ ಚಾಲಕರು ಈ ಬಗ್ಗೆಎಚ್ಚರಿಕೆ ವಹಿಸಬೇಕು.ಸರಕುಮಿತಿಗಿಂತ ಹೆಚ್ಚಿದ್ದರೆ ಲೋಡ್ಮಾಡಿಕೊಂಡು ಹೋಗಲು ಒಪ್ಪಬಾರದುಎನ್ನುವುದು ಅಧಿಕಾರಿಗಳ ಮಾತು.ಆದರೆಹೆಚ್ಚು ಬಾಡಿಗೆ,ಲಾಭದಉದ್ದೇಶದಿಂದ ಇಂತಹ ಕೃತ್ಯಗಳುಮಿತಿಮೀರಿ ನಡೆಯುತ್ತಿದೆ.ಮೋಟಾರುವಾಹನ ಕಾಯ್ದೆ ಕಲಂ 113ಮತ್ತು194ಸಿಪ್ರಕಾರ ಗೂಡ್ಸ್ ವಾಹನದಲ್ಲಿಮಿತಿ ಮೀರಿ ಸರಕು ಸಾಗಾಟ ಕಾನೂನುಬಾಹಿರವಾಗಿದೆ.ಆದರೂಕಡಿವಾಣ ಬಿದ್ದಿಲ್ಲ.
ಸಣ್ಣಗೂಡ್ಸ್ ವಾಹನಗಳಾದ ಟೆಂಪೋ ರಿಕ್ಷಾ,ಪಿಕಪ್‌ಗಳಲ್ಲಿಅವುಗಳ ಗಾತ್ರಕ್ಕಿಂತ ಉದ್ದನೆಯಸರಕುಗಳನ್ನು ಸಾಗಿಸುವುದು ಕಂಡುಬರುತ್ತದೆ.ಮುಂಭಾಗದಮತ್ತು ಹಿಂಭಾಗದಲ್ಲಿ ವಾಹನಕ್ಕಿಂತಬಹಳಷ್ಟು ಮುಂದೆ ಚಾಚುತ್ತವೆ.ಇದುಮುಂಭಾಗದ ಅಥವಾ ಹಿಂಭಾಗದಲ್ಲಿಬರುವ ವಾಹನಗಳಿಗೆ ಅಪಾಯಕಾರಿ.ಮುಂದಿನವಾಹನ ಹಠಾತ್ ಪ್ರೇಕ್ ಹಾಕಿದರೆಮುಂಭಾಗದ ಮತ್ತು ಹಿಂಭಾಗದ ಎರಡೂವಾಹನಗಳಿಗೆ ಹಾನಿಯಾಗುವ,ಅದರಲ್ಲಿರುವಸವಾರರಿಗೆ ಅಪಾಯಕಾರಿಯಾಗಿಪರಿಣಮಿಸುವ ಸಾಧ್ಯತೆಯಿದೆ ಇದೆ.ಕೆಲವೊಮ್ಮೆಇಳಿಜಾರು ಏರು ಹಾದಿಯಲ್ಲಿ ಸಾಗುವಾಗವಾಹನದಲ್ಲಿರುವ ಸರಕು ರಸ್ತೆಗೆಬೀಳುವ ಸಾಧ್ಯತೆ ಇದೆ.ಮಾತ್ರವಲ್ಲದೆಹಿಂದೆ -ಮುಂದೆಸಾಗುವ ವಾಹನಗಳಿಗೂ ಇದರಿಂದ ಅಪಾಯಉಂಟಾಗುವ ಸಾಧ್ಯತೆಯಿದೆ.
ಇತ್ತೀಚೆಗೆಪಾಲಿಕೆ ವಾಹನದಲ್ಲೇ ನಿಯಮ ಮೀರಿಕಬ್ಬಿಣದ ಪೈಪ್‌ಗಳನ್ನು ಸಣ್ಣವಾಹನದಲ್ಲಿ ಹೇರಿಕೊಂಡು ಸಾಗುತ್ತಿದ್ದಾಗಬಂಟ್ಸ್ ಹಾಸ್ಟೆಲ್ ಬಳಿ ರಸ್ತೆಗೆಬಿದ್ದಿದೆ.ಎದುರಿನಲ್ಲಿಯಾವುದೇ ವಾಹನಗಳು ಇಲ್ಲದೇಇದ್ದುದರಿಂದ ಸಂಭಾವ್ಯ ಅಪಾಯತಪ್ಪಿದೆ.ಪಾಲಿಕೆವಾಹನದಲ್ಲಿ ನಿಯಮ ಮೀರಿ ಸರಕುಸಗಾಟ ಮಾಡುತ್ತಿದ್ದುದಕ್ಕೆಸಾರ್ವಜನಿರಿಂದಲೂ ಆಕ್ಷೇಪವ್ಯಕ್ತವಾಗಿತ್ತು.ಈಹಿಂದೆ ನಂತೂರು ಜಂಕ್ಷನ್ ನಲ್ಲಿಇಂತಹ ಸಾಕಷ್ಟುಘಟನೆಗಳು ನಡೆದಿತ್ತು.ಬೆಂದೂರು,ಬಂಗ್ರಕೂಳೂರು ಬಳಿಯೂ ವಾಹನದಲ್ಲಿದ್ದಸರಕು ರಸ್ತೆ ಬಿದ್ದಿತ್ತು.ವಾಹನಗಳುಜಖಂ ಗೊಂಡಿರುವುದು,ವಾಹನಸವಾರರು ಗಾಯಗೊಂಡ ಉದಾಹರಣೆಗಳೂಇವೆ.
ಬಂಟ್ವಾಳಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಬೋಳಂತೂರು ಎಂಬಲ್ಲಿ ಗೂಡ್ಸ್ವಾಹನದಲ್ಲಿ ಸಂಚಾರ ನಿಯಮವನ್ನುಉಲ್ಲಂಘಿಸಿ,ಅಪಾಯಕಾರಿಯಾಗಿಸಾಮಾಗ್ರಿಗಳನ್ನು ಸಾಗಿಸುತ್ತಿದ್ದವಿಡಿಯೊ ಸಾಮಾಜಿಕ ಜಾಲತಾಣದಲ್ಲಿಪ್ರಸಾರವಾಗಿದ್ದು,ಸದ್ರಿವಾಹನಕ್ಕೆ ಸಂಚಾರ ನಿಯಮದ ಅನ್ವಯಸೂಕ್ತ ದಂಡ ವಿಧಿಸಲಾಗಿರುತ್ತದೆ.ಜಿಲ್ಲೆಯಠಾಣಾ ವ್ಯಾಪ್ತಿಗಳಲ್ಲಿ ಜಾಗೃತಿಕಾರ್ಯಕ್ರಮಗಳನ್ನು ಆಯೋಜಿಸಿ,ವಾಹನಚಾಲಕರಿಗೆ ಸಂಚಾರ ನಿಯಮಗಳ ಪಾಲನೆ,ವಾಹನಚಾಲನೆಯ ವೇಳೆ ಕೈಗೊಳ್ಳಬೇಕಾದಮುಂಜಾಗ್ರತಾ ಕ್ರಮಗಳು ಸೇರಿದಂತೆಇತರೆ ಅಗತ್ಯ ಮಾಹಿತಿಗಳ ಬಗ್ಗೆಅರಿವು ಮೂಡಿಸಲಾಗುವುದು ಎಂದುಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಡಾ.ಅರೂಣ್ಕೆ ತಿಳಿಸಿದ್ದಾರೆ.
ಸರಕು ಸಾಗಾಟ ವಾಹನಗಳಲ್ಲಿ ನಿಯಮ ಮೀರಿ ಲೋಡ್ ಹಾಕಿಕೊಂಡು ಹೋಗುವಂತಿಲ್ಲ. ಚಾಲಕರು- ಮಾಲಕರಿಗೆ ಈಗಾಗಲೇ ಹಲವು ಬಾರಿ ನಿರ್ದೇಶನಗಳನ್ನು ನೀಡಲಾಗಿದೆ. ಆದರೂ ಕೆಲವು ಕಡೆಗಳಲ್ಲಿ ವಾಹನ ನಿಬಿಡ ರಸ್ತೆಗಳಲ್ಲಿ ಸರಕು ಹೇರಿಕೊಂಡು ಹೋಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಈಗಾಗಲೇ ದಂಡ ವಿಧಿಸುವ ಪ್ರಕ್ರಿಯೆಗಳು ನಡೆಯುತ್ತಿದ್ದು, ನಿಯಮ ಉಲ್ಲಂಘಿಸಿದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.