ತರಬೇತಿ ಕಾರ್ಯಾಗಾರವನ್ನು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಉದ್ಘಾಟಿಸಿದರು. ಪ್ರಮುಖರಾದ ಉಮೇಶ್, ರಾಜೇಂದ್ರ ಭಟ್, ಸತೀಶ್ ಕುಮಾರ್ ಕೆಡೆಂಜಿ, ಅಶೋಕ್ ನೆಕ್ರಾಜೆ, ಪ್ರಕಾಶ್ ಪಾವ್ಲ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು. 
ದಕ್ಷಿಣ ಕನ್ನಡ

ನಿರಂತರ ಶ್ರಮದಿಂದ ಯಶಸ್ಸು : ಅಶೋಕ್ ಕುಮಾರ್

ಸೌಮ್ಯ ಆರ್

ಕಡಬ: ಪರೀಕ್ಷೆ ಜೀವನದ ಅಂತಿಮ ತೀರ್ಪಲ್ಲ. ಸೋಲು ಎನ್ನುವುದು ನಿಮ್ಮ ಸಾಮರ್ಥ್ಯ ಅಳೆಯುವ ಪ್ರಮಾಣವಲ್ಲ, ಅದು ಇನ್ನಷ್ಟು ಶ್ರಮಿಸುವ ಪಾಠ ಮಾತ್ರ. ತಪ್ಪುಗಳಿಂದ ಕಲಿಯುವ ಮನೋಭಾವ ಬೆಳೆಸಿಕೊಂಡರೆ ಜೀವನದಲ್ಲಿ ಯಶಸ್ಸು ಖಂಡಿತ ಎಂದು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಹೇಳಿದರು.


ಯುವವಾಹಿನಿ ಕಡಬ ಘಟಕ ವತಿಯಿಂದ ಕಡಬ ಸೇಂಟ್ ಜೋಕಿಮ್ಸ್ ಸಭಾಭವನದಲ್ಲಿ ಕಡಬ ತಾಲೂಕಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ ವಿದ್ಯಾಸ್ಪೂರ್ತಿ ಉದ್ಘಾಟಿಸಿ ಮಾತನಾಡಿದರು.


ಯುವವಾಹಿನಿ ಕಡಬ ಘಟಕ ಅಧ್ಯಕ್ಷ ಉಮೇಶ್ ಬಳ್ಪ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ರಾಜೇಂದ್ರ ಭಟ್, ಪುತ್ತೂರು ತಾಲೂಕು ಬಿಲ್ಲವ ಸಂಘ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಕುಕ್ಕೆ ಸುಬ್ರಹ್ಮಣ್ಯ ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯ ಅಶೋಕ್ ನೆಕ್ರಾಜೆ, ಸೇಂಟ್ ಜೋಕಿಮ್ಸ್ ವಿದ್ಯಾಸಂಸ್ಥೆ ಸಂಚಾಲಕ ಪ್ರಕಾಶ್ ಪಾವ್ಲ್ ಡಿಸೋಜ, ಸಮಾಜ ಸೇವಕ ಡಾ.ರವಿ ಕಕ್ಕೆಪದವು, ಕಡಬ ತಾಲೂಕು ಬಿಲ್ಲವ ಸಂಚಾಲನ ಸಮಿತಿ ಪ್ರಧಾನ ಸಂಚಾಲಕ ಸತೀಶ್ ಕೆ., ಯುವವಾಹಿನಿ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಜಯರಾಮ, ಸುಂದರ ಪೂಜಾರಿ ಅಂಗಣ, ಪ್ರಚಾರ ನಿರ್ದೇಶಕ ಶಿವಪ್ರಸಾದ್ ನೂಚಿಲ, ಉದಯ ಕೋಲಾಡಿ ಉಪಸ್ಥಿತರಿದ್ದರು.


ಯುವವಾಹಿನಿ ಕಡಬ ಘಟಕದ ವಿದ್ಯಾನಿಧಿ ನಿರ್ದೇಶಕ ಹರ್ಷಿತ್ ಸ್ವಾಗತಿಸಿದರು. ಕಾರ್ಯದರ್ಶಿ ಸತೀಶ್ ಕೊರಪ್ಪಣೆ ವಂದಿಸಿದರು. ಮಾಜಿ ಅಧ್ಯಕ್ಷ ಕೃಷ್ಣಪ್ಪ ಅಮೈ ನಿರೂಪಿಸಿದರು.