ಶೌರ್ಯ ಸ್ವಯಂಸೇವಕರಿಗೆ ಅಂತಾರಾಷ್ಟ್ರೀಯ ತರಬೇತಿದಾರರಿಂದ ತರಬೇತಿ ಕಾರ್ಯಕ್ರಮ ನಡೆಯಿತು. 
ದಕ್ಷಿಣ ಕನ್ನಡ

ಶೌರ್ಯ ಸ್ವಯಂಸೇವಕರಿಗೆ ತರಬೇತಿ ಕಾರ್ಯಕ್ರಮ

ಸೌಮ್ಯ ಆರ್

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಿಪತ್ತುಗಳ ನಿರ್ವಹಣೆಗೆಂದು ರಚಿಸಲಾದ ಶೌರ್ಯ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿಯ ಆಯ್ದ ಸ್ವಯಂಸೇವಕರಿಗೆ ಈಜುವಿಕೆ ಹಾಗೂ ಮುಳುಗುವಿಕೆ ಮೂಲಕ ಆಪತ್ತಿನಲ್ಲಿರುವವರ ರಕ್ಷಣೆಯ ವಿಧಾನಗಳ ಬಗ್ಗೆ ತರಬೇತಿ ಕಾರ್ಯಕ್ರಮ ನಡೆಯಿತು.



ವಿಟ್ಲ ಸಮೀಪದ ವಾರಾಣಾಸಿ ಸಾವಯವ ಫಾರ್ಮ್ ಅಡ್ಯನಡ್ಕದಲ್ಲಿ ಅಂತಾರಾಷ್ಟ್ರೀಯ ಈಜು ಹಾಗೂ ಸುರಕ್ಷಿತ ಮುಳುಗುವಿಕೆ ತರಬೇತಿ ಸಂಸ್ಥೆ ಫ್ರೀಡಿಂಗ್ ಕೋಚ್ ಆಫ್ ಏಷ್ಯಾ ವತಿಯಿಂದ ಆಯೋಜಿಸಲಾಗಿತ್ತು.


ಫ್ರೀಡಿಂಗ್ ಕೋಚ್ ಆಫ್ ಏಷ್ಯಾ ಸ್ಥಾಪಕರಾದ ಹಾಲೆಂಡ್‌ನ ಜೆರೋಯೆನ್‌ಎಲೌಟ್, ನ್ಯೂಯಾರ್ಕಿನ ಅಂಜಲಿ, ಕೇರಳ ಕೊಟ್ಟಯಂನ ಜಾಕೋಬ್‌ಜೋಸ್ ಹಾಗೂ ತಂಡ ವಿಶೇಷ ತರಬೇತಿ ನಡೆಸಿದರು.


ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್‌ಎಸ್.ಎಸ್ ನಿರ್ದೇಶನದಂತೆ ಈಜುವಿಕೆಯಲ್ಲಿ ಪರಿಣತಿ ಸಾಧಿಸಲು ಆಸಕ್ತಿ ಇರುವ ಬೆಳ್ತಂಗಡಿ ತಾಲೂಕಿನ 6 ಮಂದಿಯನ್ನು ಗುರುತಿಸಲಾಗಿದ್ದು, ಬೆಳ್ತಂಗಡಿ ಶೌರ್ಯ ಸಮಿತಿಯ ಮಾಸ್ಟರ್ ಅವಿನಾಶ್ ಭಿಡೆ, ಸ್ವಯಂಸೇವಕರಾದ ಸಚಿನ್ ಭಿಡೆ, ಜಯರಾಮ ನಡ, ಅನಿಲ್ ಪಿ.ಎ., ಸತೀಶ್ ನೆರಿಯ, ರಮೇಶ ಬೈರಕಟ್ಟ ಜನಜಾಗೃತಿ ಪ್ರಾದೇಶಿಕ ವಿಭಾಗದ ನಿರ್ದೇಶಕ ವಿವೇಕ್ ವಿ.ಪಾಯ್ಸ ಮಾರ್ಗದರ್ಶನದಲ್ಲಿ ತರಬೇತಿ ಪೂರ್ಣಗೊಳಿಸಿದ್ದಾರೆ.