ದೇರಳಕಟ್ಟೆ ಬಳಿ ಫಾಸ್ಟ್ ಫುಡ್ ಗಾಗಿ ರಸ್ತೆಯಲ್ಲೇ ವಾಹನ ನಿಲ್ಲಿಸಿರುವುದರಿಂದ ಬ್ಲಾಕ್ ಆಗಿರುವುದು. 
ದಕ್ಷಿಣ ಕನ್ನಡ

ವ್ಯಾಪಾರದ ಅಬ್ಬರ, ಸವಾರರು ತತ್ತರ : ಉಳ್ಳಾಲ ಭಾಗದಲ್ಲಿ ವಾಹನ ಸಂಚಾರಕ್ಕೆ ಅಡಚಣೆ : ಸ್ಥಳೀಯಾಡಳಿತ, ಸಂಚಾರಿ ಪೊಲೀಸರು ಮೌನ

ಸೌಮ್ಯ ಆರ್

ಪಾದಚಾರಿಗಳಿಗೆ ಸಮಸ್ಯೆ

ಫಾಸ್ಟ್ ಫುಡ್, ಇತರ ವ್ಯಾಪಾರ

ಹೆದ್ದಾರಿ ಪಕ್ಕದಲ್ಲೇ ವ್ಯಾಪಾರ

ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಯುದ್ದಕ್ಕೂ ಪಕ್ಕದಲ್ಲೇ ಮೀನು, ತರಕಾರಿ, ಹಣ್ಣು ಹಾಗೂ ಇತರ ವಸ್ತುಗಳ ವ್ಯಾಪಾರದ ಅಬ್ಬರ ಜೋರಾಗಿದೆ. ಇದರಿಂದಲೂ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಆದರೂ ಸಂಚಾರ ಪೊಲೀಸರು ಈ ಬಗ್ಗೆ ಗಮನವನ್ನೇ ಹರಿಸುತ್ತಿಲ್ಲ ಎನ್ನುವ ಅಸಮಾಧಾನ ಸಾರ್ವಜನಿಕರದ್ದು. ಹೊಸ ವ್ಯಾಪಾರಿ ಮಳಿಗೆಗಳ ಆರಂಭದ ಸಂದರ್ಭದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಬಗ್ಗೆ ಪರವಾನಗಿಯಲ್ಲಿ ಸೂಚನೆ ನೀಡುವ ಸ್ಥಳೀಯಾಡಳಿತಗಳು ಈ ನಿಯಮ ಜಾರಿಗೆ ತರುವ ವಿಚಾರದಲ್ಲಿ ಮೌನ ವಹಿಸಿದೆ ಎನ್ನುವ ಆರೋಪವೂ ಕೇಳಿ ಬಂದಿದೆ.
ದೇರಳಕಟ್ಟೆ ಆಸುಪಾಸಿನಲ್ಲಿ ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸಿರುವುದು.

ಪಾಲನೆಯಾಗದ ಸಂಸದ, ಸ್ಪೀಕರ್ ಸೂಚನೆ

ತಿಂಡಿ ಸೇವನೆಗಾಗಿಯೇ ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸಲಾಗುತ್ತಿದೆ, ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡದ ಕಟ್ಟಡಗಳ ಮಾಲೀಕರು ಮತ್ತು ಸ್ಥಳೀಯಾಡಳಿತ ಇದಕ್ಕೆ ಹೊಣೆಗಾರರು. ಪೊಲೀಸ್ ಇಲಾಖೆಯೂ ಕ್ರಮ ಕೈಗೊಳ್ಳದಿದ್ದರೆ ಕಾರಣ ಸಮಸ್ಯೆ ಬಗೆಹರಿಸಲು ಅಸಾಧ್ಯ.

ಜನರು ತಮ್ಮ ಹೊಟ್ಟೆ ತುಂಬಿಸುವ ಭರದಲ್ಲಿ ವಾಹನಗಳನ್ನು ರಸ್ತೆಯಲ್ಲಿಟ್ಟು ಇನ್ನೊಬ್ಬರ ಜೀವಹಾನಿಗೆ ಕಾರಣರಾಗಬಾರದು. ಈಗಾಗಲೇ ನಿಗದಿತ ಪ್ರದೇಶದಲ್ಲಿ ಹಲವು ಅಪಘಾತಗಳು ಸಂಭವಿಸಿವೆ. ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು.