ಸಾಂದರ್ಭಿಕ ಚಿತ್ರ 
ದಕ್ಷಿಣ ಕನ್ನಡ

ಮಂಗಳೂರು ಮೂವರು ಹಿರಿಯ ನಾಗರಿಕರು ಲಿಫ್ಟ್‌ನಲ್ಲಿ ಬಾಕಿ

ಮಂಗಳೂರು: ನಗರದ ಅತ್ತಾವರ ಹೊಟೇಲೊಂದರಲ್ಲಿ ಶನಿವಾರ ಮೂವರು ಲಿಫ್ಟ್ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಅವರನ್ನು ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳದ ಸಿಬಂದಿ ಕಾರ್ಯಾಚರಣೆ ನಡೆಸಿ ಹೊರಗೆ ಕರೆ ತಂದಿದ್ದಾರೆ.

ಪ್ರವಾಸಕ್ಕೆ ಬಂದಿದ್ದ ಮೂವರು ಹಿರಿಯ ನಾಗರಿಕರು ಹೊಟೇಲ್ ರೂಮ್ ನಲ್ಲಿ ವಾಸ್ತವ್ಯವಿದ್ದರು. ಚೆಕ್ ಔಟ್ ಮಾಡಿ ತೆರಳುವ ಉದ್ದೇಶದಿಂದ ಮೂವರೂ ಕೆಳಗೆ ಬರುತ್ತಿದ್ದ ವೇಳೆ ಘಟನೆ ನಡೆದಿದೆ. ನೆಲ ಅಂತಸ್ತಿಗೆ ಬಂದರೂ ಲಿಫ್ಟ್ ನ ಬಾಗಿಲು ತೆರೆಯದೆ ಜಾಮ್ ಆಗಿ ಬಾಕಿಯಾಗಿದೆ. ಹೊಟೇಲ್ ಸಿಬಂದಿ ಎಷ್ಟೇ ಪ್ರಯತ್ನ ಪಟ್ಟರೂ ತೆರೆಯಲು ಸಾಧ್ಯವಾಗಿಲ್ಲ. ಸುಮಾರು ಒಂದು ಗಂಟೆ ಕಾಲ ಒಳಗೆ ಬಾಕಿಯಾಗಿದ್ದರಿಂದ ಭಯ, ಗಾಬರಿಯಿಂದ ಉಸಿರು ಕಟ್ಟುವ ಪರಿಸ್ಥಿತಿಗೆ ತಲುಪಿದ್ದರು.
ಕೊನೆಗೆ ಪಾಂಡೇಶ್ವರ ಅಗ್ನಿಶಾಮಕ ಠಾಣೆ ಸಿಬಂದಿ ಸ್ಥಳಕ್ಕೆ ಭೇಟಿ ನೀಡಿ ಲಿಫ್ಟ್ ಬಾಗಿಲನ್ನು ಬಲವಂತವಾಗಿ ತೆರೆದು ಒಳಗಿದ್ದವರನ್ನು ಹೊರಕ್ಕೆ ಕರೆ ತಂದಿದ್ದಾರೆ.