Arrest 
ದಕ್ಷಿಣ ಕನ್ನಡ

ಮಾದಕ ವಸ್ತು ಸೇವಿಸಿದ ಮೂವರು ವಶಕ್ಕೆ

ಸಂಪ್ಯ ಠಾಣೆಯ ಪೊಲೀಸರು ಪ್ರಕರಣ ದಾಖಲು

ಪುತ್ತೂರು ಗ್ರಾಮಾಂತರ: ಒಳಮೊಗ್ರು ಗ್ರಾಮದ, ವಿನಾಯಕನಗರ ಸಾರ್ವಜನಿಕ ರಸ್ತೆ ಬದಿಯಲ್ಲಿ ಭಾನುವಾರ ಸಂಜೆ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ 3 ಮಂದಿಯನ್ನು ಸಂಪ್ಯ ಠಾಣೆಯ ಪೊಲೀಸರು ವಶಕ್ಕೆ ಪಡೆದು ಮಾದಕವಸ್ತು ಸೇವನೆ ಮಾಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸುಳ್ಯ ತಾಲೂಕಿನವರಾದ ಜಾಲ್ಸೂರು ಗ್ರಾಮದ ವೈಚಾರು ನಿವಾಸಿ ಅಬ್ದುಲ್ ನಾಸೀರ್(27), ಸೋಣಂಗಿರಿ ನಿವಾಸಿ ಅಬ್ದುಲ್ ನಾಸೀರ್ (26) ಮತ್ತು ಆರಂತೋಡು ಗ್ರಾಮದ ಅಂಗಡಿ ಮಜಲು ನಿವಾಸಿ ಗಣೇಶ್(25) ಆರೋಪಿಗಳು. ರಸ್ತೆ ಬದಿಯಲ್ಲಿ ಅನುಮಾನಾಸ್ಪದ ರೀತಿ ತಿರುಗಾಡುತ್ತಿದ್ದ ಈ ಮೂವರನ್ನು ಮಾದಕವಸ್ತು ಸೇವನೆ ಮಾಡಿರುವ ಸಂಶಯದಿಂದ ಸಂಪ್ಯ ಠಾಣೆ ಪೊಲೀಸರು ವಶಕ್ಕೆ ಪಡೆದು ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಅವರು ಬಾರ್ಬಿಟುರೇಟ್ಸ್ ಎಂಬ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿರುವುದರಿಂದ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.