ಸಾಂದರ್ಭಿಕ ಚಿತ್ರ 
ದಕ್ಷಿಣ ಕನ್ನಡ

ಮಂಗಳೂರು ಮಾದಕ ವಸ್ತು ಸೇವನೆ ಮೂವರು ಬಂಧನ

ಮಂಗಳೂರು: ನಗರ ಕಮಿಷನರೆಟ್ ನ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಮಾದಕ ವಸ್ತು ಸೇವನೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಡಗುಳಿಪಾಡಿ ಗ್ರಾಮದ ಕೈಕಂಬ ಜಂಕ್ಷನ್ ಬಳಿಅಮಲು ಪದಾರ್ಥ ಸೇವನೆ ಮಾಡಿದ ನಶೆಯಲ್ಲಿದ್ದ ಮೂಡುಪೆರಾರದ ಗುರುಕಂಬ್ಳ ನಿವಾಸಿ ಮಹಮ್ಮದ್ ಅಸದ್ (20) ಎಂಬಾತನನ್ನು ಬಜಪೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮಾದಕ ವಸ್ತು ಸೇವಿಸಿರುವುದಾಗಿ ಒಪ್ಪಿಕೊಂಡಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿಯೂ ದೃಢಪಟ್ಟಿದೆ.
ಮಂಗಳೂರಿನ ಬಿಬಿ ಅಲಾಬಿ ರಸ್ತೆಯಲ್ಲಿ ಮಾದಕ ವಸ್ತು ಸೇವಿಸಿ ತೂರಾಡುತ್ತ ಸಾಗುತ್ತಿದ್ದ ಕಸಬಾ ಬೆಂಗ್ರೆ ನಿವಾಸಿ ಮೊಹಮ್ಮದ್ ಸಫ್ವಾನ್ (24) ಹಾಗೂ ಸೆಂಟ್ರಲ್ ಮಾರ್ಕೆಟ್ ಬಳಿ ತೂರಾಡುತ್ತಾ ಸಾಗುತ್ತಿದ್ದ ಕುಪ್ಪೆಪದವು ನಿವಾಸಿ ಮೊಹಮ್ಮದ್ ಅಶ್ರಫ್ (45)ನನ್ನು ಬಂದರು ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಗಾಂಜಾ ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ವೈದ್ಯಕೀಯ ತಪಾಸಣೆಯಲ್ಲಿ ಆಮದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ.
ಆರೋಪಿಗಳ ವಿರುದ್ಧ ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.