ದಕ್ಷಿಣ ಕನ್ನಡ

ಗಾಂಜಾ ಸೇವನೆ, ಮೂವರ ಬಂಧನ

ಕಾಸರಗೋಡು: ಬೀಡಿಯೊಳಗೆ ಗಾಂಜಾ ಸೇರಿಸಿ ಸೇದುತ್ತಿದ್ದ ಮೂವರನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉದ್ಯಾವರ ಕುಂಡುಕೊಳಕೆ ಅಬಿದಾ ಮಂಜಿಲ್‌ನ ಮುಹಮ್ಮದ್ ಅಬಿದ್ (34), ಮಂಜೇಶ್ವರ ಕೆ.ಜಿ.ಎಂ.ರಸ್ತೆ ಗುಡ್ಡೆಹೌಸ್ ನಿವಾಸಿ ಇಮ್ರಾನ್ ಹಸನ್ (46), ಮಂಜೇಶ್ವರ ಉದ್ಯಾವರ ಎರಡನೇ ರೈಲ್ವೆ ಗೇಟ್ ಬಳಿಯ ಅಬ್ದುಲ್ ರಹ್ಮಾನ್ (42) ಬಂಧಿತರು. ಸೋಮವಾರ ರಾತ್ರಿ ಉದ್ಯಾವರ ಬಳಿಯ ಕುಂಡುಕೊಳಕೆ ಬೀಚ್‌ನಲ್ಲಿ ಗಾಂಜಾ ಬೀಡಿ ಸೇದುತ್ತಿದ್ದಾಗ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಅವರನ್ನು ಬಳಿಕ ನೋಟಿಸ್ ನೀಡಿ ಬಿಡುಗಡೆ ಮಾಡಲಾಗಿದೆ.

ನೂಜಿಬಾಳ್ತಿಲದಲ್ಲಿ ಕಾಡಾನೆ ದಾಳಿ, ಕೃಷಿ ಹಾನಿ

ಕಡಬ: ತಾಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿ ತೋಟಕ್ಕೆ ಕಾಡಾನೆ ಲಗ್ಗೆ ಇಟ್ಟು ಅಪಾರ ಕೃಷಿ ಹಾನಿ ಮಾಡಿದೆ. ಎಳುವಾಳೆ ಭಾಸ್ಕರ ಗೌಡ ಅವರ ಕೃಷಿ ತೋಟಕ್ಕೆ ಲಗ್ಗೆ ಇಟ್ಟಿರುವ ಕಾಡಾನೆಗಳ ಹಿಂಡು ಸುಮಾರು 60 ಅಧಿಕ ಅಡಿಕೆ ಕೃಷಿ ಹಾನಿಗೊಳಿಸಿ ಅಪಾರ ನಷ್ಟ ಸಂಭವಿಸಿದೆ. ಇದೇ ಪರಿಸರದ ಹೇರ, ಆಲಾಟ ಪರಿಸರದಲ್ಲಿ ಕಾಡಾನೆಗಳ ಹಿಂಡು ಸಂಚರಿಸಿ ರೈತರ ಕೃಷಿ ಫಸಲಿಗೆ ಹಾನಿಯಾಗಿದೆ.

ಕಾಡಾನೆ ದಾಳಿಗೆ ಅಡಿಕೆ ಗಿಡಗಳು ನಾಶವಾಗಿರುವುದು.