ಸಾಂದರ್ಭಿಕ ಚಿತ್ರ 
ದಕ್ಷಿಣ ಕನ್ನಡ

ಎಂಎಡಿಎಂಎ ಮಾರಾಟ ಯತ್ನ ಮೂವರ ಬಂಧನ

ಮಂಗಳೂರು : ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಡಿ ಮೂವರನ್ನು ಕೋಡಿಕಲ್ ಬಳಿಯ ತ್ಯಾಜ್ಯ ಸಂಸ್ಕರಣ ಘಟಕದ ಗೇಟ್ ಬಳಿ ಉರ್ವ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಕೋಟೆಕಾರು ಕುಂಪಲ ನಿವಾಸಿಗಳಾದ ಮನೀಷ್ (20), ವ್ನಿೇಶ್ ಶೆಟ್ಟಿ (23) ಹಾಗೂ ಮಡ್ಯಾರ್ ಕೋಟೆಕಾರು ನಿವಾಸಿ ಶ್ರೀಜಿತ್ ಶೆಟ್ಟಿ (24) ಬಂಧಿತ ಆರೋಪಿಗಳು.
ಉರ್ವ ಪೊಲೀಸ್ ಗಸ್ತು ತಿರುಗುತ್ತಿರುವ ವೇಳೆ ಕೋಡಿಕಲ್ ನಾಗಬ್ರಹ್ಮ ಸನ್ನಿಧಿ ಬಳಿ ಒಂದು ದ್ವಿಚಕ್ರ ವಾಹನದಲ್ಲಿ ಮೂವರು ಯುವಕರು ಬಂದಿದ್ದಾರೆ. ಪೊಲೀಸರನ್ನು ಕಂಡು ಪಂಪ್ ಹೌಸ್ ಕಡೆಗೆ ಹೋಗುವ ರಸ್ತೆಯಲ್ಲಿ ಸಾಗಿದ್ದಾರೆ. ಯುವಕರನ್ನು ಹಿಂಬಾಲಿಸಿ ತ್ಯಾಜ್ಯ ಸಂಸ್ಕರಣ ಘಟಕದ ಗೇಟ್ ಬಳಿ ಯುವಕರನ್ನು ಹಿಡಿದು ವಿಚಾರಣೆಗೆ ಒಳಪಡಿಸಿದಾಗ ಗ್ರಾಹಕರಿಗೆ ಮಾರಾಟ ಮಾಡಲು ಎಂಡಿಎಂಎ ತಂದಿರುವುದಾಗಿ ತಿಳಿಸಿದ್ದಾರೆ. ಆರೋಪಿಗಳ ಬಳಿ ಸುಮಾರು 1,65,100 ರೂ. ಮೌಲ್ಯದ 16.52 ಗ್ರಾಂ. ಎಂಡಿಎಂಎ ಪತ್ತೆಯಾಗಿದೆ.
ಆರೋಪಿಗಳ ವಿರುದ್ಧ ಉರ್ವ ಠಾಣೆಯಲ್ಲಿ ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.