ಯುವವಾಹಿನಿ ಕ್ರೀಡೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಶಾಸಕ ಉಮಾನಾಥ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು. 
ದಕ್ಷಿಣ ಕನ್ನಡ

ಯುವಜನತೆ ದೇಶದ ಸಂಪತ್ತು

ಯುವವಾಹಿನಿ ಕ್ರೀಡೋತ್ಸವ

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಯುವ ಜನತೆ ದೇಶದ ನಿಜವಾದ ಸಂಪತ್ತು. ಯುವ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಬೆಳೆಸಿದರೆ ದೇಶದ ಭವಿಷ್ಯ ಬಲಿಷ್ಠಗೊಳ್ಳುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಗೆದ್ದಾಗ ಅಹಂಕಾರಪಡದೆ, ಸೋತಾಗ ಕುಗ್ಗದೆ ಎದುರಾಳಿಯನ್ನು ಗೌರವಿಸಿ ಮತ್ತೆ ಪ್ರಯತ್ನಿಸುವ ಮನೋಭಾವವೇ ನಿಜವಾದ ಕ್ರೀಡಾ ಸ್ಫೂರ್ತಿ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.

ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಯುವವಾಹಿನಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಆಳ್ವಾಸ್ ಕೃಷಿಸಿರಿ ವೇದಿಕೆಯಲ್ಲಿ ಭಾನುವಾರ ಯುವವಾಹಿನಿ ಕ್ರೀಡೋತ್ಸವ-2026ಕ್ಕೆ ಚಾಲನೆ ನೀಡಿ ಮಾತನಾಡಿದರು.

ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿದರು. ಯುವವಾಹಿನಿ ಕೇಂದ್ರ ಸಮಿತಿ ಸಲಹೆಗಾರ ಡಾ.ಎನ್.ಟಿ.ಅಂಚನ್ ಮಾತನಾಡಿದರು. ಯುವವಾಹಿನಿ ಮೂಡುಬಿದಿರೆ ಘಟಕ ಅಧ್ಯಕ್ಷ ಗಿರೀಶ್ ಕೋಟ್ಯಾನ್ ಮಾರೂರು ಅಧ್ಯಕ್ಷತೆ ವಹಿಸಿದ್ದರು. ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಧ್ವಜಾರೋಹಣ ನೆರವೇರಿಸಿದರು. 35 ಘಟಕಗಳ ಪಥಸಂಚಲನ ನಡೆಯಿತು. ಡಾ.ಮೋಹನ್ ಆಳ್ವ, ಸರ್ಜನ್ ಕಮಾಂಡರ್ ಡಾ.ಅರ್ಜುನ್ ಅಂಚನ್, ಮಹಿಳಾ ವಿಶ್ವಕಪ್ ಕಬಡ್ಡಿ ವಿಜೇತ ತಂಡದ ಸದಸ್ಯೆ ಧನಲಕ್ಷ್ಮೀ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಕಳ ಬಿಲ್ಲವ ಸಂಘ ಅಧ್ಯಕ್ಷ ಪ್ರಮಲ್ ಕುಮಾರ್, ಮೂಡುಬಿದಿರೆ ಬಿಲ್ಲವ ಸಂಘ ಅಧ್ಯಕ್ಷ ನವೀನ್‌ಚಂದ್ರ ಕರ್ಕೇರ, ಉದ್ಯಮಿ ನಾರಾಯಣ ಪಿ.ಎಂ., ಕೆ.ಅಮರನಾಥ ಶೆಟ್ಟಿ ಚಾರಿಟೆಬಲ್ ಟ್ರಸ್ಟ್‌ನ ಡಾ.ಅಮರಶ್ರೀ, ಯುವವಾಹಿನಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ರೇಖಾ ಗೋಪಾಲ್, ಕ್ರೀಡಾ ನಿರ್ದೇಶಕ ಶಂಕರ್ ಎ.ಕೋಟ್ಯಾನ್, ಯುವವಾಹಿನಿ ಮೂಡುಬಿದಿರೆ ಘಟಕದ ಕ್ರೀಡಾ ನಿರ್ದೇಶಕ ಪ್ರಸಾದ್ ಸುವರ್ಣ ಉಪಸ್ಥಿತರಿದ್ದರು. ಅಶೋಕ್ ಕುಮಾರ್ ಪಡ್ಪು ಸ್ವಾಗತಿಸಿದರು. ಶಂಕರ್ ಕೋಟ್ಯಾನ್ ವಂದಿಸಿದರು. ದಿನೇಶ್ ಸುವರ್ಣ ರಾಯಿ, ರಕ್ಷಾ ರೆಂಜಾಳ ನಿರೂಪಿಸಿದರು.

ಯುವಜನರ ಪ್ರತಿಭೆ ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸುವುದು ಸಮಾಜದ ಜವಾಬ್ದಾರಿ. ಯುವವಾಹಿನಿಗೆ ಉತ್ತಮ ಭವಿಷ್ಯವಿದ್ದು, ಯುವಕರ ಪ್ರತಿಭೆ, ಸಾಮರ್ಥ್ಯವನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸಬೇಕು.
ಉಮಾನಾಥ ಕೋಟ್ಯಾನ್ ಶಾಸಕ