ವೈಟ್‌ಕೋಟ್ ಸಮಾರಂಭ ತುಂಬೆ ಹೆಲ್ತ್‌ಕೇರ್‌ನ ಮೆಡಿಕಲ್ ಟೂರಿಸಂ ಮುಖ್ಯಸ್ಥೆ ಡಾ.ಬೆನಜೀರ್ ಅಮೀರ್ ಅಲಿ ಉದ್ಘಾಟಿಸಿದರು. ಉಪಕುಲಪತಿ ಡಾ.ಕೆ.ಎಸ್.ಗಂಗಾಧರ ಸೋಮಯಾಜಿ, ವಿಶ್ರಾಂತ ಉಪಕುಲಪತಿ ಡಾ.ಎಂ.ವಿಜಯ್ ಕುಮಾರ್ ಮಾತನಾಡಿದರು. ಕುಲಸಚಿವ ಡಾ.ಆರ್.ಅಶ್ವಿನಿ ದತ್ ಇನ್ನಿತರರ ಉಪಸ್ಥಿತರಿದ್ದರು. 
ದಕ್ಷಿಣ ಕನ್ನಡ

ಮಾನವೀಯ ಸೇವೆಯ ಸಂಕೇತ ವೈಟ್‌ಕೋಟ್

ವೈಟ್‌ಕೋಟ್ ಸಮಾರಂಭ

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಬಿಳಿಕೋಟ್ ಜವಾಬ್ದಾರಿ ಮತ್ತು ಮಾನವೀಯ ಸೇವೆಯ ಸಂಕೇತವಾಗಿದ್ದು, ವೈದ್ಯಕೀಯ ವಿದ್ಯಾರ್ಥಿಗಳು ಬಿಳಿಕೋಟ್ ಧರಿಸುವುದರೊಂದಿಗೆ ರೋಗಿಗಳ ಸೇವೆ, ಸಮರ್ಪಣೆ ಮತ್ತು ಮಾನವೀಯ ಮೌಲ್ಯಗಳನ್ನು ಪಾಲಿಸುವ ಸಂಕಲ್ಪ ಮಾಡಬೇಕು ಎಂದು ದೇರಳಕಟ್ಟೆ ಯೆನೆಪೋಯ ವೈದ್ಯಕೀಯ ಕಾಲೇಜಿನ ಹಳೇ ವಿದ್ಯಾರ್ಥಿ, ತುಂಬೆ ಹೆಲ್ತ್‌ಕೇರ್‌ನ ಮೆಡಿಕಲ್ ಟೂರಿಸಂ ಮುಖ್ಯಸ್ಥೆ ಡಾ.ಬೆನಜೀರ್ ಅಮೀರ್ ಅಲಿ ಕಿವಿಮಾತು ಹೇಳಿದರು.

ದೇರಳಕಟ್ಟೆಯ ಯೆನೆಪೋಯ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ 2026ನೇ ಸಾಲಿನ ವಿದ್ಯಾರ್ಥಿಗಳಿಗಾಗಿ ಗುರುವಾರ ಕ್ಯಾಂಪಸ್‌ನ ಯೆಂಡ್ಯುರೆನ್ಸ್ ಸಭಾಂಗಣದಲ್ಲಿ ವೈಟ್‌ಕೋಟ್ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಯೆನೆಪೋಯ (ಪರಿಗಣಿತ) ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಯೆನೆಪೋಯ ಅಬ್ದುಲ್ಲಾ ಕುಂಞ, ಉಪಕುಲಪತಿ ಡಾ.ಕೆ.ಎಸ್.ಗಂಗಾಧರ ಸೋಮಯಾಜಿ, ವಿಶ್ರಾಂತ ಉಪಕುಲಪತಿ ಡಾ.ಎಂ.ವಿಜಯ್ ಕುಮಾರ್ ಮಾತನಾಡಿದರು.

ಕುಲಸಚಿವ ಡಾ.ಆರ್.ಅಶ್ವಿನಿ ದತ್, ಇಸ್ಲಾಮಿಕ್ ಅಕಾಡೆಮಿ ಆಫ್ ಎಜುಕೇಶನ್‌ನ ಕಾರ್ಯದರ್ಶಿ ಡಾ.ಅಖ್ತರ್ ಹುಸೇನ್, ಪರೀಕ್ಷಾ ನಿಯಂತ್ರಕ ಡಾ.ಬಿ.ಟಿ.ನಂದೀಶ್, ವಿದ್ಯಾರ್ಥಿ ವ್ಯವಹಾರಗಳ ಡೀನ್ ಡಾ.ಮಜಿ ಜೋಸ್, ಹಣಕಾಸು ಅಧಿಕಾರಿ ಅಮೀರ್ ಬಾವಾ ಅಹ್ಮದ್ ಉಪಸ್ಥಿತರಿದ್ದರು.

ಯೆನೆಪೋಯ ವೈದ್ಯಕೀಯ ಕಾಲೇಜು ಡೀನ್ ಡಾ.ಪ್ರಕಾಶ್ ಸಲ್ದಾನ್ಹ ಸ್ವಾಗತಿಸಿದರು. ಉಪಪ್ರಾಂಶುಪಾಲ ಡಾ.ಅಭಯ್ ನಿರ್ಗುಡೆ ಯೆನೆಪೋಯ ಸಂಸ್ಥೆಯ ಪರಿಚಯಿಸಿದರು. ವೈದ್ಯಕೀಯ ಅಧೀಕ್ಷಕ ಡಾ.ಹಬೀಬ್ ರೆಹಮಾನ್ ಪ್ರತಿಜ್ಞಾ ವಿಧಿ ಬೋಧಿಸಿದರು. ಡಾ.ಶಹೀನಾ ಯಾಸೀರ್ ವಂದಿಸಿದರು.

ಸಂಸ್ಥೆಯ ಬೆಳವಣಿಗೆಯಲ್ಲಿ ಸಮರ್ಪಿತ ಬೋಧಕವರ್ಗ ಹಾಗೂ ಬೋಧಕೇತರ ಸಿಬ್ಬಂದಿಯ ಕೊಡುಗೆಯಿಂದಾಗಿ ವಿಶ್ವಮಟ್ಟದಲ್ಲಿ ಖ್ಯಾತಿ ಪಡೆದುಕೊಂಡಿದೆ. ಸಂಸ್ಥೆ ಅತ್ಯಾಧುನಿಕ ಮೂಲಸೌಕರ್ಯ ಮತ್ತು ಉತ್ತಮ ಶೈಕ್ಷಣಿಕ ವಾತಾವರಣವನ್ನು ಹೊಂದಿದ್ದು ವೈದ್ಯಕೀಯ ಶಿಕ್ಷಣ ಪಡೆಯುವ ಅವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು.
ಡಾ.ವೈ.ಅಬ್ದುಲ್ಲಾ ಕುಂಞ, ಕುಲಪತಿ, ಯೆನೆಪೋಯ ವಿವಿ