ಧನಂಜಯ ಮೂಡುಬಿದಿರೆ ಅವರಿಗೆ ಸ್ಫೂರ್ತಿರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಉಮಾನಾಥ ಕೋಟ್ಯಾನ್, ಅರ್ಜುನ್ ಭಂಡಾರ್ಕರ್, ಕೆ.ಅಭಯಚಂದ್ರ ಜೈನ್, ಸುದರ್ಶನ್ ಎಂ., ಲೀಲಾಧರ ಬಿ.ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು. 
ದಕ್ಷಿಣ ಕನ್ನಡ

ವಿಶೇಷ ಮಕ್ಕಳನ್ನು ಮುನ್ನೆಲೆಗೆ ತರುವ ಕಾರ್ಯ

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ವಿಶೇಷ ಸಾಮರ್ಥ್ಯದ ಮಕ್ಕಳಲ್ಲಿ ಪ್ರತಿಭೆಯಿದೆ. ಪಾಲಕರು ಧೃತಿಗೆಡದೆ ಸಮರ್ಥವಾಗಿ ಇಂಥ ಮಕ್ಕಳನ್ನು ಬೆಳೆಸಬೇಕು. ಸ್ಫೂರ್ತಿಯಂತಹ ಸಂಸ್ಥೆಗಳು ವಿಶೇಷ ಮಕ್ಕಳನ್ನು ಸೇರಿಸಿಕೊಂಡು ಅವರಿಗೆ ಕ್ರೀಡೆ, ಆರೋಗ್ಯ, ತರಬೇತಿ ನೀಡುವ ಮೂಲಕ ಅವರನ್ನು ಸಮಾಜದ ಮುನ್ನೆಲೆಗೆ ತರುವ ಕೆಲಸ ಮಾಡುತ್ತಿರುವುದರಿಂದ ನಾವು ಪ್ರೋತ್ಸಾಹಿಸಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಬೆಳುವಾಯಿ ಕೆಸರ್ ಗದ್ದೆಯಲ್ಲಿರುವ ಸ್ಫೂರ್ತಿ ವಿಶೇಷ ಸಾಮರ್ಥ್ಯದ ಮಕ್ಕಳ ಶಾಲೆ ಹಾಗೂ ತರಬೇತಿ ಕೇಂದ್ರದ ಕಲಾ ಸಂಭ್ರಮ- 2025 ಕಾರ್ಯಕ್ರಮ ಶನಿವಾರ ಉದ್ಘಾಟಿಸಿ ಮಾತನಾಡಿದರು.
ಸೇವ್ ಲೈಫ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಅರ್ಜುನ್ ಭಂಡಾರ್ಕರ್ ಅಧ್ಯಕ್ಷತೆ ವಹಿಸಿದರು. ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಮುಖ್ಯ ಅತಿಥಿಯಾಗಿದ್ದರು. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ., ಮುಂಬೈ ಪದ್ಮಶಾಲಿ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಲೀಲಾಧರ ಬಿ.ಶೆಟ್ಟಿಗಾರ್, ಅಮರನಾಥ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಸ್ಥಾಪಕಿ ಅಮರಶ್ರೀ ಶೆಟ್ಟಿ, ಉದ್ಯಮಿಗಳಾದ ಅಬುಲಾಲ ಪುತ್ತಿಗೆ, ಸಿ.ಎಚ್.ಅಬ್ದುಲ್ ಗಫೂರ್, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಂಡಿಗ ರತ್ನಾಕರ ಶೆಟ್ಟಿ, ಸಂಚಾಲಕ ರಾಜೇಶ್ ಸುವರ್ಣ, ಹೆಲ್ಪಿಂಗ್ ಇಸ್ರೇಲ್ ತಂಡದ ಸುನೀಲ್ ಮೆಂಡೋನ್ಸಾ ಮತ್ತಿತರರು ಉಪಸ್ಥಿತರಿದ್ದರು.
ಶಾಲೆ ಸಂಸ್ಥಾಪಕ ಪ್ರಕಾಶ್ ಶೆಟ್ಟಿಗಾರ್ ಸ್ವಾಗತಿಸಿದರು. ಮುಖ್ಯಶಿಕ್ಷಕಿ ಶರ್ಮಿಳಾ ವಾಸ್ ವರದಿ ವಾಚಿಸಿದರು. ಸಂಸ್ಥೆ ಪ್ರಮುಖರಾದ ಉಷಾಲತಾ ಸಹಕರಿಸಿದರು. ಸುಚಿತ್ರ ಪೂಜಾರಿ ಸನ್ಮಾನಿತರ ಪತ್ರ ವಾಚಿಸಿ ವಂದಿಸಿದರು. ಸ್ಫೂರ್ತಿ ಶಾಲಾ ವಿಶೇಷ ಚೇತನ ವಿದ್ಯಾರ್ಥಿಗಳು ಹಾಗೂ ಇತರರಿಂದ ವೈವಿಧ್ಯಮಯ ಸಾಂಸ್ಕೃತಿಕ ಸಂಭ್ರಮ ನಡೆಯಿತು. ಸಂಜೆ ನೃತ್ಯ ಸಂಭ್ರಮ, ತುಳು ಹಾಸ್ಯಮಯ ನಾಟಕ ಪನೊಡಿತ್ತ್‌ಂಡ್ ಸ್ವಾರಿ ಪ್ರದರ್ಶನಗೊಂಡಿತು.

ಸ್ಫೂರ್ತಿ ರತ್ನ ಪ್ರಶಸ್ತಿ ಪ್ರದಾನ

ಹಿರಿಯ ಪತ್ರಕರ್ತ ಧನಂಜಯ ಮೂಡುಬಿದಿರೆ ಅವರಿಗೆ ಸ್ಫೂರ್ತಿರತ್ನ ಪ್ರಶಸ್ತಿ ಪ್ರದಾನಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅರ್ಜುನ್ ಭಂಡಾರ್‌ಕರ್ ದಂಪತಿ, ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಶಯನ್, ಸಹಳಾ ಮತ್ತು ರಂಜಿತ್ ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾವರ್ಧಕ ಸಂಘದ ಹಿರಿಯರಾದ ವಸಂತ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಲತಾ ಸುರೇಶ್ ಹಾಗೂ ಕಲೆ ಮತ್ತು ಕ್ರೀಡೆಯಲ್ಲಿ ಸಾಧನೆಗೈಸ ಶಾಲೆ ಶಿಕ್ಷಕಿ ಸುಚಿತ್ರಾ ಅವರನ್ನು ಗೌರವಿಸಲಾಯಿತು.