ಅಜ್ಜಿನಡ್ಕ ಬದ್ರಿಯಾ ಜುಮಾ ಮಸೀದಿಯ ಖತೀಬ್ ಜುಬೈರ್ ಫೈಝಿ ರಕ್ತ ನೀಡುವ ಮೂಲಕ ಶಿಬಿರ ಉದ್ಘಾಟಿಸಿದರು. ಬದ್ರಿಯಾ ವೆಲ್ಫೇರ್ ಸೊಸೈಟಿ ಅಧ್ಯಕ್ಷ ಇರ್ಷಾದ್ ಅಜ್ಜಿನಡ್ಕ, ಬಂಟ್ವಾಳ ಸರ್ಕಾರಿ ಕಾಲೇಜು ಉಪನ್ಯಾಸಕ ಎಸ್.ಎಂ.ಅಹ್ಮದ್, ಸಮಾಜಸೇವಕ ಇಬ್ರಾಹಿಂ ಕೊಮರಂಗಳ ಮತ್ತಿತರರು ಉಪಸ್ಥಿತರಿದ್ದರು. 
ದಕ್ಷಿಣ ಕನ್ನಡ

ವೆಲ್ಫೇರ್ ಸೊಸೈಟಿಯ ಸೇವೆ ಶ್ಲಾಘನೀಯ

ಪ್ರಮುಖ ಮುಖ್ಯಾಂಶಗಳು

  • ರಕ್ತದಾನ, ವೈದ್ಯಕೀಯ ಶಿಬಿರ
  • 40ನೇ ವರ್ಷಾಚರಣೆ
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ನಿರಂತರ ಆರೋಗ್ಯ, ವೈದ್ಯಕೀಯ, ಶಿಕ್ಷಣ ಸೇವೆಯಲ್ಲಿ ಸಂಘಟನೆ ನಿರತವಾಗಿದ್ದು 40ನೇ ವರ್ಷಾಚರಣೆ ಪ್ರಯುಕ್ತ ನಿರಂತರ ಸೇವಾ ಕಾರ್ಯ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಅಜ್ಜಿನಡ್ಕ ಬದ್ರಿಯಾ ಜುಮಾ ಮಸೀದಿ ಖತೀಬ್ ಜುಬೈರ್ ಫೈಝಿ ಅಭಿಪ್ರಾಯಪಟ್ಟರು.
ಅಜ್ಜಿನಡ್ಕ ಬದ್ರಿಯಾ ವೆಲ್ಫೇರ್ ಸೊಸೈಟಿಯ 40ನೇ ವರ್ಷಾಚರಣೆ ಪ್ರಯುಕ್ತ ಕಂಕನಾಡಿ ಫಾದರ್ ಮಲ್ಲರ್ ಆಸ್ಪತ್ರೆ, ದೇರಳಕಟ್ಟೆ ಯೇನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ, ಬ್ಲಡ್ ಡೋನರ್ಸ್ ಸಹಕಾರದಲ್ಲಿ ಬೃಹತ್ ರಕ್ತದಾನ, ವೈದ್ಯಕೀಯ, ನೇತ್ರ ತಪಾಸಣೆ ಹಾಗೂ ಉಚಿತ ಕನ್ನಡಕ ವಿತರಣಾ ಶಿಬಿರ ಅಜ್ಜಿನಡ್ಕ ದ.ಕ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಬದ್ರಿಯಾ ವೆಲ್ಫೇರ್ ಸೊಸೈಟಿ ಅಧ್ಯಕ್ಷ ಇರ್ಷಾದ್ ಅಜ್ಜಿನಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಂಟ್ವಾಳ ಸರ್ಕಾರಿ ಕಾಲೇಜು ಉಪನ್ಯಾಸಕ ಎಸ್.ಎಂ.ಅಹ್ಮದ್, ಸಮಾಜಸೇವಕ ಇಬ್ರಾಹಿಂ ಕೊಮರಂಗಳ, ಯುಬಿಎಂ ರಹೀಂ ಉಚ್ಚಿಲ್, ಅಜ್ಜಿನಡ್ಕ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಸುಲೈಮಾನ್, ಕೋಟೆಕಾರ್ ಪಪಂ ಸದಸ್ಯರಾದ ಅಹ್ಮದ್ ಬಾವ ಅಜ್ಜಿನಡ್ಕ, ಇಸ್ಹಾಕ್, ಬದ್ರಿಯಾ ವೆಲ್ಫೇರ್ ಸೊಸೈಟಿ ಉಪಾಧ್ಯಕ್ಷ ಇಸ್ಮಾಯಿಲ್ ಸಿ.ಎಚ್., ರಕ್ತದಾನಿ ಅರ್ಷದ್ ಮೊದಲಾದವರು ಉಪಸ್ಥಿತರಿದ್ದರು. ಸೊಸೈಟಿ ಪ್ರದಾನ ಕಾರ್ಯದರ್ಶಿ ಸುಲೈಮಾನ್ ಬಾತಿಷ್ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಹನೀಫ್ ಎಸ್.ಬಿ. ನಿರೂಪಿಸಿದರು.

ದ.ಕ. ಜಿಲ್ಲೆಯಲ್ಲಿರುವ ಆಸ್ಪತ್ರೆಗಳಲ್ಲಿ ರಕ್ತ ಕೊರತೆ ನೀಗಿಸುವ ನಿಟ್ಟಿನಲ್ಲಿ ರಕ್ತದಾನ ಶಿಬಿರದ ಜತೆ ಜನರನ್ನು ಆರೋಗ್ಯವಾಗಿಡುವ ನಿಟ್ಟಿನಲ್ಲಿ ವೈದ್ಯಕೀಯ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದು ಈ ಕಾರ್ಯ ನಿರಂತರ ನಡೆಯಲಿದೆ.