ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಡಾ.ಯು.ರಾಮಯ್ಯಗೌಡ ವಳಂಬ್ರ, ಡಾ.ಕಾಣಿ ಯು.ಗೌಡ, ಸುಮಂತ್ ಕುವಾರ್ ಜೈನ್ ಮೊದಲಾದವರಿದ್ದರು.
ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಭಾರತವು ಜಗತ್ತಿನ ಸಾಂಸ್ಕೃತಿಕ ರಾಯಭಾರಿಯಾಗಿದೆ. ಹಲವಾರು ವಿದೇಶಿ ಆಕ್ರಮಗಳು ನಡೆದರೂ ಭಾರತೀಯ ಸಂಸ್ಕೃತಿಯನ್ನು ನಾಶಪಡಿಸಲಾಗಿಲ್ಲ. ಭಾರತೀಯ ಸಂಸ್ಕೃತಿಯ ಬೇರುಗಳು ಅಷ್ಟು ಆಳವಾಗಿವೆ ಎಂದು ಅಮೆರಿಕಾ ವೈದ್ಯ ಡಾ.ಯು.ರಾಮಯ್ಯಗೌಡ ವಳಂಬ್ರ ಹೇಳಿದರು.
ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ವಾತನಾಡಿದರು.
ಅಮೆರಿಕಾ ಮೂಲದವರಾದ ಡಾ.ಕಾಣಿ ಯು.ಗೌಡ ಭಾರತೀಯ ಸಂಸ್ಕೃತಿಗೆ ತಾನು ವಾರು ಹೋಗಿರುವುದಾಗಿ ತಿಳಿಸಿದರು.
ಎಕ್ಸೆಲ್ ಸಂಸ್ಥೆ ಅಧ್ಯಕ್ಷ ಸುಮಂತ್ ಕುವಾರ್ ಜೈನ್ ಅಧ್ಯಕ್ಷತೆ ವಹಿಸಿದ್ದರು.
ಸವಾರಂಭದಲ್ಲಿ ವೈದ್ಯ ದಂಪತಿಗಳನ್ನು ಸನ್ಮಾನಿಸಲಾಯಿತು. ಅರಮಲೆಬೆಟ್ಟ ಕ್ಯಾಂಪಸ್ ಪ್ರಾಚಾರ್ಯ ಡಾ.ಪ್ರಜ್ವಲ್ ಕಜೆ, ವಳಂಬ್ರ ಕುಟುಂಬಸ್ಥರಾದ ಗೋಪಾಲಕೃಷ್ಣ, ಪ್ರಸಾದ, ಭರತ್, ಉಪಪ್ರಾಚಾರ್ಯ ರೋಹಿತ್, ಆಡಳಿತಾಧಿಕಾರಿ ಕೀರ್ತಿನಿಧಿ ಮೊದಲಾದವರಿದ್ದರು.
ಪ್ರಾಂಶುಪಾಲ ಡಾ.ನವೀನ್ ಕುವಾರ್ ಮರಿಕೆ ಸ್ವಾಗತಿಸಿದರು. ಕನ್ನಡ ಉಪನ್ಯಾಸಕರಾದ ಎಸ್. ತಿಪ್ಪೇಸ್ವಾಮಿ ನಿರೂಪಿಸಿದರು.
ಬೆಳ್ತಂಗಡಿ ತಾಲೂಕಿನ ವಳಂಬ್ರದಲ್ಲಿ ಜನಿಸಿ ಅಮೆರಿಕಾದಂತಹ ದೇಶದಲ್ಲಿ ವೈದ್ಯನಾಗಿರುವುದಕ್ಕೆ ನನಗೆ ಹೆಮ್ಮೆ ಇದೆ. ಪ್ರತಿಯೊಬ್ಬರೂ ತಮಗೆ ಒದಗಿರುವ ಅವಕಾಶಗಳನ್ನು ಬಳಸಿಕೊಂಡು ಉನ್ನತ ಮಟ್ಟಕ್ಕೆ ಏರಬೇಕು.