ಬೆಳ್ತಂಗಡಿ: ನರ್ಸಿಂಗ್ ವೃತ್ತಿ ಕೇವಲ ಉದ್ಯೋಗವಲ್ಲ, ಅದು ಮಾನವಕುಲದ ಸೇವೆಗೆ ಮುಡಿಪಾದ ಜೀವನ. ಯಂತ್ರಗಳು ರೋಗಿಯ ಆರೋಗ್ಯ ಪರಿಶೀಲಿಸಬಹುದು. ಆದರೆ ರೋಗಿಯ ಮನಸ್ಸಿನ ನೋವು ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳಲು ನರ್ಸ್ಗಳಿಗೆ ಕರುಣಾಮಯ ಹೃದಯ ಅಗತ್ಯ ಎಂದು ಕಲ್ಪತರು ಸ್ಕೂಲ್ ಆ್ಯಂಡ್ ಕಾಲೇಜ್ ಆಫ್ ನರ್ಸಿಂಗ್ ಸಂಸ್ಥೆಯ ಅಧ್ಯಕ್ಷ ಡಾ.ಜೇಮ್ಸ್ ಪಟ್ಟೇರಿಲ್ ಹೇಳಿದರು.
ಕಲ್ಪತರು ಸ್ಕೂಲ್ ಆ್ಯಂಡ್ ಕಾಲೇಜ್ ಆಫ್ ನರ್ಸಿಂಗ್ ನ 22ನೇ ತಂಡದ ವಿದ್ಯಾರ್ಥಿಗಳಿಗಾಗಿ ನಡೆದ ಮಾನವೀಯ ಸೇವೆ ಮತ್ತು ರೋಗಿಗಳ ಆರೈಕೆ ಸಂಕಲ್ಪದೊಂದಿಗೆ ದೀಪ ಬೆಳಗಿಸುವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಥಮ ಬಾರಿ ಬಿ.ಎಸ್ಸಿ. ನರ್ಸಿಂಗ್ ಪದವಿ ಕೋರ್ಸ್ಗೆ ವಿದ್ಯಾರ್ಥಿಗಳ ಪ್ರವೇಶಾತಿ ಆರಂಭಿಸಲಾಗುವುದು ಎಂದು ತಿಳಿಸಿದರು.
ಸಂಸ್ಥೆಯ ನಿರ್ದೇಶಕರಾದ ಸನೀಶ್ ಪುತ್ತು ಪರಂಬಿಲ್, ಪ್ರಾಂಶುಪಾಲೆ ಚಂದ್ರಿಕಾ, ಗಾಂಧಿಬಾಗಿಲು ಸಿಯೋನ್ ಆಶ್ರಮದ ಆಡಳಿತ ಟ್ರಸ್ಟಿ ಯು.ಸಿ.ಪೌಲೋಸ್, ಬಡ್ಯಾರ್ನ ಎಲ್.ಎಂ.ಪಿಂಟೊ, ಆರೋಗ್ಯ ಕೇಂದ್ರದ ನಿರ್ದೇಶಕ ರೋಶನ್ ಕ್ರಾಸ್ತಾ, ಉಜಿರೆ ಎಸ್ಡಿಎಂ ಆಸ್ಪತ್ರೆಯ ನರ್ಸಿಂಗ್ ಅಧೀಕ್ಷಕಿ ಶೆರ್ಲಿ, ಲಾಯಿಲ ಜ್ಯೋತಿ ಆಸ್ಪತ್ರೆಯ ಆಡಳಿತ ಟ್ರಸ್ಟಿ ಮೆರಿಟ್ ಎಸ್.ಡಿ. ಉಪಸ್ಥಿತರಿದ್ದರು.