ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ರಾಷ್ಟ್ರೀಯ ವಾಲಿಬಾಲ್ ಆಟಗಾರ ಗಣೇಶ್ ರೈ ಮುಂಡಾಸು ಅವರನ್ನು ಗೌರವಿಸಲಾಯಿತು. ಚಂದ್ರ ಅಮೆಕ್ಕಳ, ಸೋಮಶೇಖರ ಜೆ.ಎಸ್., ಕುಸುವಾವತಿ ಮೊದಲಾದವರಿದ್ದರು. 
ದಕ್ಷಿಣ ಕನ್ನಡ

ಸಂಸ್ಥೆಗಳಿಗೆ ಸರ್ಕಾರ ಒದಗಿಸಲಿ ಸವಲತ್ತು

ಕಾಸರಗೋಡು: ಸಾವಾಜಿಕ ಬದ್ಧತೆಯೊಂದಿಗೆ ಚಟುವಟಿಕೆ ನಡೆಸುವ ಸಂಸಂಸ್ಥೆಗಳನ್ನು ಗುರುತಿಸಿ, ವಿವಿಧ ಸವಲತ್ತು ಒದಗಿಸಲು ಸರ್ಕಾರ ಮುಂದಾಗುವ ಮೂಲಕ ಸಂಟನೆಗಳ ಕಾರ್ಯಚಟುವಟಿಕೆಗಳಿಗೆ ವೇಗ ದೊರಕಲು ಸಾಧ್ಯ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ಹೇಳಿದರು. 
ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಮತ್ತು ಮಹಿಳಾ ಸವಾಜದ ಸಹಯೋಗದೊಂದಿಗೆ ಕ್ಲಬ್ ವಠಾರದ ಬಜಕೂಡ್ಲು ಮಿನಿ ಸ್ಟೇಡಿಯಂನಲ್ಲಿ ಕ್ಲಬ್‌ನ 37ನೇ ವಾರ್ಷಿಕೋತ್ಸವ, ಸನ್ಮಾನ, ವ್ಯಾಟ್ ಕಬಡ್ಡಿ ಪಂದ್ಯಾಟ ಉದ್ಘಾಟಿಸಿ ವಾತನಾಡಿದರು.
 ಕ್ಲಬ್ ಅಧ್ಯಕ್ಷ ಚಂದ್ರ ಅಮೆಕ್ಕಳ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಪಂ ಸದಸ್ಯ ಸೋಮಶೇಖರ ಜೆ.ಎಸ್., ಎಣ್ಮಕಜೆ ಗ್ರಾಪಂ ಅಧ್ಯಕ್ಷೆ ಕುಸುವಾವತಿ, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯೆ ವಿದ್ಯಾ ಕುವಾರಿ, ಎಣ್ಮಕಜೆ ಗ್ರಾ.ಪಂ. ಸದಸ್ಯ ಕೃಷ್ಣಪ್ಪ ಬಜಕೂಡ್ಲು, ಹಿರಿಯ ತೀರ್ಪುಗಾರ ಕುಞಿರಾಮ ಪಳ್ಳತ್ತಡ್ಕ ಭಾಗವಹಿಸಿದ್ದರು.  
 ಬೆಂಗಳೂರಿನ ಸಿಬಿಐ ಹಿರಿಯ ಪಬ್ಲಿಕ್ ಪ್ರಾಸಿಕ್ಯೂಟರ್ ಶಿವಾನಂದ ಬಿ.ಆರ್., ಕ್ಲಬ್ ಸ್ಥಾಪಕಾಧ್ಯಕ್ಷ ಎಂ.ವಿಷ್ಣು ನಾವಡ, ಉದ್ಯಮಿಗಳಾದ ಪ್ರಕಾಶ್ ಶೆಟ್ಟಿ ಕುದ್ವ, ಉದಯ ಚೆಟ್ಯಾರ್ ಬಜಕೂಡ್ಲು, ಕ್ಲಬ್ಬಿನ ಗೌರವಾಧ್ಯಕ್ಷ ಪದ್ಮನಾಭ ಸುವರ್ಣ ಉಪಸ್ಥಿತರಿದ್ದರು. ಈ ಸಂದರ್ಭ ರಾಷ್ಟ್ರೀಯ ವಾಲಿಬಾಲ್ ಆಟಗಾರ ಗಣೇಶ್ ರೈ ಮುಂಡಾಸು ಹಾಗೂ ಎಣ್ಮಕಜೆ ಗ್ರಾಮ ಪಂಚಾಯಿತಿ ನಿಕಟಪೂರ್ವ ಸದಸ್ಯೆ ಉಷಾಗಣೇಶ್ ಅವರನ್ನು ಕ್ಲಬ್ ವತಿಯಿಂದ ಗೌರವಿಸಲಾಯಿತು. ರಾಷ್ಟ್ರೀಯ ಕಬಡ್ಡಿ ಪಂದ್ಯಾಟದಲ್ಲಿ ಕಾಸರಗೋಡು ಜಿಲ್ಲೆಯ ಶಾಲೆ ಹಾಗೂ ಜೂನಿಯರ್ ವಿಭಾಗವನ್ನು ಪ್ರತಿನಿಧಿಸುತ್ತಿರುವ ದೇವಿಕಾ ಭಗವತಿನಗರ ಅವರನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. 
 ಸ್ವರ್ಣಲಕ್ಷ್ಮೀ ಜಿ.ಶೆಟ್ಟಿ ಪ್ರಾರ್ಥನೆ ಹಾಡಿದರು. ರಾಜೇಶ್ ವಾಸ್ಟರ್ ಬಜಕೂಡ್ಲು ಹಾಗೂ ವಿಸ್ಮಿತಾ ಶೆಟ್ಟಿ ನಿರೂಪಿಸಿದರು. ಅಮಿತಾ ಸನ್ಮಾನ ಪತ್ರ ವಾಚಿಸಿದರು. ಕ್ಲಬ್‌ನ ಕಾರ್ಯದರ್ಶಿ ಸಂತೋಷ್ ಖಂಡಿಗೆ ವಂದಿಸಿದರು.

 ನೃತ್ಯೋತ್ಸವ

 ಕಾರ್ಯಕ್ರಮದ ಪೂರ್ವಭಾವಿಯಾಗಿ ಬೆಳಗ್ಗೆ ಕ್ಲಬ್ ಕಚೇರಿಯಲ್ಲಿ ಗಣಪತಿ ಹವನ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನೃತ್ಯೋತ್ಸವ, ಕೈಕೊಟ್ಟು ಕಳಿ, 58 ಕೆ.ಜಿ. ವಿಭಾಗದ ಪುರುಷರ ಹೊನಲು ಬೆಳಕಿನ ವ್ಯಾಟ್ ಕಬಡ್ಡಿ ಪಂದ್ಯಾಟ ನಡೆಯಿತು.
 ’