ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮ ರಥೋತ್ಸವ ನಡೆಯಿತು.  
ದಕ್ಷಿಣ ಕನ್ನಡ

ಕಾವೂರು ಶ್ರೀ ಮಹಾಲಿಂಗೇಶ್ವರ ದೇವಳ ವೈಭವದ ಬ್ರಹ್ಮ ರಥೋತ್ಸವ

ಮಂಗಳೂರು: ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಮಹೋತ್ಸವ ಅಂಗವಾಗಿ ಶನಿವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವದ ಬ್ರಹ್ಮ ರಥೋತ್ಸವ ನಡೆಯಿತು.
ಬೆಳಗ್ಗೆ ರುದ್ರಾಭಿಷೇಕ, ರಥ ಕಲಶ, ಮಧ್ಯಾಹ್ನ ಮಹಾಪೂಜೆ, ರಥಾರೋಹಣ, ಪಲ್ಲಪೂಜೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಬ್ರಹ್ಮರಥೋತ್ಸವ ಮತ್ತು ಉತ್ಸವ, ಶ್ರೀ ಭೂತಬಲಿ, ಶಯನ, ಕವಾಟ ಬಂಧನ ನಡೆಯಿತು.
ಇಂದು ನೇಮ: ಜ.18ರಂದು ಬೆಳಗ್ಗೆ ಕವಾಟೋದ್ಘಾಟನೆ, ಅಭಿಷೇಕ, ತುಲಾಭಾರ ಸೇವೆ, ರುದ್ರಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಸಂಜೆ ಮರುಳು ಧೂಮಾವತಿ ಗಗ್ಗರ ಸೇವೆ, ಬಳಿಕ ಬಲಿ ಹೊರಟು ಉತ್ಸವ, ಓಕುಳಿ, ರಥಾರೋಹಣ, ಕಟ್ಟೆ ಪೂಜೆ, ಆವಭೃತ ಅಗ್ನಿಕೇಳಿ, ದೈವದ ಭೇಟಿ, ಧ್ವಜಾವರೋಹಣ, ದೈವಗಳ ನೇಮ ನಡೆಯಲಿದೆ. 20ರಂದು ಸಂಪ್ರೋಕ್ಷಣೆ, ಮಹಾಮಂತ್ರಾಕ್ಷತೆ ನೆರವೇರಲಿದೆ.