ಮಂಗಳೂರು: ಮೂಡುಬಿದಿರೆ ಶ್ರೀ ದಿಗಂಬರ ಜೈನ ಮಠಕ್ಕೆ ಶುಕ್ರವಾರ ಮಂಗಳೂರು ರಾಮಕೃಷ್ಣ ಮಠದ ಜಿತಕಾಮಾನಂದ ಸ್ವಾಮೀಜಿ ಹಾಗೂ ಆಂಧ್ರಪ್ರದೇಶ ಕಡಪದ ಸ್ವರೂಪಾನಂದ ಸ್ವಾಮೀಜಿ ಭೇಟಿ ನೀಡಿ ಭಗವಾನ್ ಪಾರ್ಶ್ವನಾಥ ಸ್ವಾಮಿ, ಮಹಾಮಾತೆ ಕುಷ್ಮಾಂಡಿನೀ ದೇವಿ ದರ್ಶನ ಮಾಡಿದರು. ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಜೊತೆಗೆ ಧರ್ಮ ಚರ್ಚೆ ನಡೆಸಿದರು. ಈ ಸಂದರ್ಭ ಉಭಯ ಶ್ರೀಗಳವರನ್ನು ಮೂಡು ಬಿದಿರೆ ಸ್ವಾಮೀಜಿ ಗೌರವಿಸಿದರು. ಸಂಜಯಂತ ಕುಮಾರ್, ಪ್ರಜ್ವಲ್ ಮೂಡುಬಿದಿರೆ ಉಪಸ್ಥಿತರಿದ್ದರು.